ನಿತೇಶ್‌ ತಿವಾರಿ ನಿರ್ದೇಶನದಲ್ಲಿ ಯಶ್‌, ರಣಬೀರ್‌ ಕಪೂರ್‌ ಮುಖ್ಯಪಾತ್ರದಲ್ಲಿ ನಟಿಸಿರುವ ‘ರಾಮಾಯಣ’ ಸಿನಿಮಾದ ಹಾಡೊಂದರ ರೀರೆಕಾರ್ಡಿಂಗ್‌ ಬಗ್ಗೆ ಚಿತ್ರ ಸಾಹಿತಿ ಡಾ ಕುಮಾರ್‌ ವಿಶ್ವಾಸ್‌ ಭಾವನಾತ್ಮಕವಾಗಿ ವಿವರಿಸಿದ್ದಾರೆ.

ನಿತೇಶ್‌ ತಿವಾರಿ ನಿರ್ದೇಶನದಲ್ಲಿ ಯಶ್‌, ರಣಬೀರ್‌ ಕಪೂರ್‌ ಮುಖ್ಯಪಾತ್ರದಲ್ಲಿ ನಟಿಸಿರುವ ‘ರಾಮಾಯಣ’ ಸಿನಿಮಾದ ಹಾಡೊಂದರ ರೀರೆಕಾರ್ಡಿಂಗ್‌ ಬಗ್ಗೆ ಚಿತ್ರ ಸಾಹಿತಿ ಡಾ ಕುಮಾರ್‌ ವಿಶ್ವಾಸ್‌ ಭಾವನಾತ್ಮಕವಾಗಿ ವಿವರಿಸಿದ್ದಾರೆ.

‘ಅದು ರಾಮ ಅಯೋಧ್ಯೆ ಬಿಟ್ಟು ಕಾಡಿಗೆ ತೆರಳುವ ಸನ್ನಿವೇಶದಲ್ಲಿ ಬರುವ ಹಾಡು. ಈ ಹಾಡಿನ ರೆಕಾರ್ಡಿಂಗ್‌ಗೆ ಏಳು ದಿನಗಳ ಸುದೀರ್ಘ ಅವಧಿ ಹಿಡಿಯಿತು. ನಮ್ಮ ಮನಸ್ಸು ಅದೆಷ್ಟು ಭಾವುಕವಾಗಿತ್ತೆಂದರೆ ನಮಗೆ ಕಣ್ಣೀರನ್ನು ತಡೆ ಹಿಡಿಯಲಾಗುತ್ತಿರಲಿಲ್ಲ. ಭಕ್ತಿ ಮತ್ತು ಭಾವನೆಗಳು ತುಂಬಿ ಹರಿಯುತ್ತಿದ್ದ ಕಾರಣ ಕೆಲಸ ಮುಗಿಸಲು ಸುದೀರ್ಘ ಸಮಯ ಹಿಡಿಯಿತು’ ಎಂದು ಡಾ. ಕುಮಾರ್‌ ಹೇಳಿದ್ದಾರೆ.

ಹ್ಯಾನ್ಸ್‌ ಜಿಮ್ಮರ್‌, ಎ ಆರ್‌ ರೆಹಮಾನ್‌ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿಬಂದಿದೆ.