‘ನನಗೆ ಟಾಲಿವುಡ್‌ನ ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ ಮೇಲೆ ಕ್ರಶ್‌ ಆಗಿತ್ತು’ ಎಂಬ ಸಾನ್ವಿ ಸುದೀಪ್‌ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

 ಸಿನಿವಾರ್ತೆ

‘ನನಗೆ ಟಾಲಿವುಡ್‌ನ ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ ಮೇಲೆ ಕ್ರಶ್‌ ಆಗಿತ್ತು’ ಎಂಬ ಸಾನ್ವಿ ಸುದೀಪ್‌ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸಂದರ್ಶನವೊಂದರಲ್ಲಿ ಸಂದರ್ಶಕಿ ಸಾನ್ವಿ ಸುದೀಪ್ ಅವರಿಗೆ ಯಶ್‌ ಬಗ್ಗೆ ಪ್ರಶ್ನೆ ಕೇಳಿದ್ದರು. ಯಶ್‌ ಅವರ ಕುರಿತು ಮಾತನಾಡುವಾಗ, ‘ನಿಮಗೆ ಯಶ್‌ ಮೇಲೆ ಕ್ರಶ್‌ ಆಗಿತ್ತಾ?’ ಎಂದು ಸಂದರ್ಶಕಿ ಕೇಳಿದಾಗ ಸಾನ್ವಿ ಅವರು, ‘ಯಶ್‌ ನನ್ನ ತಂದೆಯ ಸ್ನೇಹಿತ. ತಂದೆಯ ಸ್ನೇಹಿತನ ಮೇಲೆ ಕ್ರಶ್‌ ಹುಟ್ಟಿಕೊಳ್ಳುವುದಕ್ಕೆ ಹೇಗೆ ಸಾಧ್ಯ?’ ಎಂದಿದ್ದಾರೆ.

ಬಳಿಕ ಅವರು, ‘ಆದರೆ, ನನಗೆ ಅಲ್ಲು ಅರ್ಜುನ್‌ ಮೇಲೆ ಎಷ್ಟು ಕ್ರಶ್‌ ಇತ್ತು ಅಂದರೆ ಅಲ್ಲು ಅರ್ಜುನ್‌ ಫೋಟೋ ಇರುವ ಟೀ ಶರ್ಟ್‌ ಧರಿಸಿ ‘ಪುಷ್ಪ 2’ ಸಿನಿಮಾ ನೋಡಲು ಹೋಗಿದ್ದೆ. ಅಲ್ಲು ಅರ್ಜುನ್‌ ಅವರಂತೆಯೇ ಬಾಲಿವುಡ್‌ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರು ಕೂಡ ನನ್ನ ಕ್ರಶ್‌ ಎಂದು ಸಾನ್ವಿ ಸುದೀಪ್‌ ಹೇಳಿಕೊಂಡಿದ್ದಾರೆ.