ಎಫ್‌-35 ದುರಸ್ತಿಗೆ ಬ್ರಿಟನ್‌ನ 24 ತಜ್ಞರು ಕೇರಳಕ್ಕೆ ಆಗಮನ

| N/A | Published : Jul 06 2025, 11:49 PM IST / Updated: Jul 07 2025, 04:42 AM IST

ಸಾರಾಂಶ

ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೂ.14ರಂದು ತುರ್ತು ಲ್ಯಾಂಡ್‌ ಆಗಿರುವ ಬ್ರಿಟನ್‌ ನೌಕಾಪಡೆಗೆ ಸೇರಿದ ಅತ್ಯಾಧುನಿಕ ಎಫ್‌-35ಬಿ ಯುದ್ಧವಿಮಾನದ ಪರಿಶೀಲನೆಗೆ ಇದೀಗ ಬ್ರಿಟನ್‌ ಇದೀಗ ವಿಶೇಷ ತಜ್ಞರನ್ನು ಕಳುಹಿಸಿಕೊಟ್ಟಿದೆ.

ತಿರುವನಂತಪುರ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೂ.14ರಂದು ತುರ್ತು ಲ್ಯಾಂಡ್‌ ಆಗಿರುವ ಬ್ರಿಟನ್‌ ನೌಕಾಪಡೆಗೆ ಸೇರಿದ ಅತ್ಯಾಧುನಿಕ ಎಫ್‌-35ಬಿ ಯುದ್ಧವಿಮಾನದ ಪರಿಶೀಲನೆಗೆ ಇದೀಗ ಬ್ರಿಟನ್‌ ಇದೀಗ ವಿಶೇಷ ತಜ್ಞರನ್ನು ಕಳುಹಿಸಿಕೊಟ್ಟಿದೆ.

14 ತಜ್ಞರು ಹಾಗೂ 10 ಸಿಬ್ಬಂದಿಯನ್ನೊಳಗೊಂಡ ಬ್ರಿಟನ್‌ ರಾಯಲ್‌ ಏರ್‌ಫೋರ್ಸ್‌ನ ಏರ್‌ಬಸ್‌ ಎ400ಎಂ ಅಟ್ಲಾಸ್‌ ವಿಮಾನ ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬಂದಿಳಿದಿದೆ. ಈ ತಂಡ ಎಫ್‌-35 ವಿಮಾನದ ಪರಿಶೀಲನೆ ನಡೆಸಲಿದೆ. ಹಾಳಾಗಿರುವ ವಿಮಾನವನ್ನು ಸ್ಥಳೀಯವಾಗಿ ದುರಸ್ತಿಗೊಳಿಸಲು ಸಾಧ್ಯವೇ ಅಥವಾ ಒಂದೊಂದೇ ಭಾಗ ಪ್ರತ್ಯೇಕಗೊಳಿಸಿ ಸರಕು ಸಾಗಣೆ ವಿಮಾನದ ಮೂಲಕ ವಾಪಸ್‌ ಸಾಗಿಸಬೇಕೇ ಎಂಬ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಸದ್ಯಕ್ಕಂತು ಬ್ರಿಟನ್‌ ಈ ಎಫ್‌-35 ವಿಮಾನವನ್ನು ಏರ್‌ಲಿಫ್ಟ್‌ ಮಾಡುವ ಯೋಜನೆ ಹೊಂದಿಲ್ಲ. ಅದರ ಹೈಡ್ರಾಲಿಕ್ಸ್‌ನಲ್ಲಿ ಸಮಸ್ಯೆ ಇದ್ದು, ಅದನ್ನು ರಿಪೇರಿ ಸಾಧ್ಯವೇ ಎಂಬುದರ ಕುರಿತು ಪರಿಶೀಲಿಸುವುದೇ ಮೊದಲ ಆದ್ಯತೆ ಎನ್ನಲಾಗಿದೆ. ಅನಿವಾರ್ಯವಾದರಷ್ಟೇ ಏರ್‌ಲಿಫ್ಟ್‌ ಮಾಡಲಿದ್ದಾರೆ. ಇದಕ್ಕಾಗಿ ಸಿ-17 ಗ್ಲೋಬ್‌ಮಾಸ್ಟರ್‌ ವಿಮಾನವನ್ನು ತರಿಸಿಕೊಳ್ಳಬೇಕಾಗುತ್ತದೆ. ಎಫ್‌-35 ವಿಮಾನ ನಿಲುಗಡೆಗೆ ಏರ್ಪೋರ್ಟಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

Read more Articles on