ಸಾರಾಂಶ
1 ಲೀಟರ್‌ನ ಕುಡಿಯುವ ನೀರಿನ ಬಾಟಲ್‌ನಲ್ಲಿ ಸರಾಸರಿ 2 ಲಕ್ಷದ 40 ಸಾವಿರದ ಪ್ಲಾಸ್ಟಿಕ್ ಕಣಗಳಿವೆ ಎಂಬ ಆತಂಕಕಾರಿ ವಿಷಯವನ್ನು ಸಂಶೋಧನೆಯೊಂದು ತಿಳಿಸಿದೆ.
ವಾಷಿಂಗ್ಟನ್: 1 ಲೀಟರ್‌ನ ಕುಡಿಯುವ ನೀರಿನ ಬಾಟಲ್‌ನಲ್ಲಿ ಸರಾಸರಿ 2 ಲಕ್ಷದ 40 ಸಾವಿರದ ಪ್ಲಾಸ್ಟಿಕ್ ಕಣಗಳಿವೆ ಎಂಬ ಆತಂಕಕಾರಿ ವಿಷಯವನ್ನು ಸಂಶೋಧನೆಯೊಂದು ತಿಳಿಸಿದೆ.
ಅಮೆರಿಕದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಸಂಶೋಧಕರು ನಡೆಸಿರುವ ಅಧ್ಯಯನದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ನೀರಿನ ಕಣಗಳಲ್ಲಿ ನ್ಯಾನೊಪ್ಲಾಸ್ಟಿಕ್ ಕಣಗಳಿದ್ದು ಅವುಗಳ ಸೇವನೆಯಿಂದ ಪ್ಲಾಸ್ಟಿಕ್ ಕಣಗಳು ನಮ್ಮ ದೇಹದ ರಕ್ತನಾಳಕ್ಕೆ ಪ್ರವೇಶಿಸಿ ವಿವಿಧ ಅಂಗಾಂಗಗಳಿಗೆ ಹಾನಿ ಮಾಡಲಿದೆ.
ಅಲ್ಲದೆ ಗರ್ಭದೊಳಗಿರುವ ಮಗುವಿನ ಪ್ಲೆಸೆಂಟಾಗೆ ಪ್ರವೇಶಿಸಿ ಅವುಗಳಿಗೂ ಹಾನಿ ಮಾಡಲಿದೆ ಎಂದು ವರದಿ ಎಚ್ಚರಿಸಿದೆ.ಸಂಶೋಧಕರು ಮೂರು ಬ್ರಾಂಡ್‌ಗಳ ಮಿನರಲ್ ಕುಡಿಯುವ ನೀರಿನ ಬಾಟಲ್‌ಗಳಲ್ಲಿ ಪ್ರಯೋಗ ಮಾಡಿದಾಗ ಅವರಿಗೆ ಎಲ್ಲ ಬಾಟಲ್‌ಗಳಲ್ಲಿ 1,10,000 ದಿಂದ 3,70,000 ಪ್ಲಾಸ್ಟಿಕ್ ಕಣಗಳು ಪತ್ತೆಯಾಗಿವೆ.
ಅವುಗಳಲ್ಲಿ ಶೇ.90ರಷ್ಟು ಕಣಗಳು ನ್ಯಾನೊ ಪ್ಲಾಸ್ಟಿಕ್‌ಗಳಾಗಿದ್ದು, ಹೆಚ್ಚು ಹಾನಿಕಾರಕ ಎಂಬುದು ಸಾಬೀತಾಗಿತ್ತು. 2022ರಲ್ಲಿ ಪ್ರಕಟವಾದ ವರದಿಯಲ್ಲಿ ನಲ್ಲಿಯಲ್ಲಿ ಬರುವ ನೀರಿನಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳಿವೆ ಎಂದು ಉಲ್ಲೇಖಿಸಿತ್ತು.
ಈಗ ಮಂಡಿಸಿರುವ ವರದಿಯಲ್ಲಿ ಅದಕ್ಕಿಂತಲೂ ಚಿಕ್ಕದಾದ (ತಲೆ ಕೂದಲಿನ 1/70ಭಾಗ) ಪ್ಲಾಸ್ಟಿಕ್ ಕಣಗಳು ಬಾಟಲ್ ನೀರಿನಲ್ಲೂ ಇದ್ದು ಅವುಗಳಿಂದ ನಮ್ಮ ದೇಹಕ್ಕೆ ಹೆಚ್ಚು ಪ್ರಮಾಣದ ಹಾನಿಯಾಗಲಿದೆ ಎಂದು ವರದಿ ತಿಳಿಸಿದೆ.
ಇದಕ್ಕೂ ಮೊದಲು ನಲ್ಲಿ ನೀರಿನಲ್ಲೂ ಸಹ ಪ್ಲಾಸ್ಟಿಕ್ ಕಣಗಳಿವೆ ಎಂದು 2022ರ ಸಂಶೋಧನಾ ವರದಿ ಉಲ್ಲೇಖಿಸಿತ್ತು. ಆದರೆ ಅದಕ್ಕಿಂತಲೂ ಹೆಚ್ಚು ಪ್ರಮಾಣದ ಪ್ಲಾಸ್ಟಿಕ್ ಕಣಗಳು ಪ್ಲಾಸ್ಟಿಕ್ ಬಾಟಲ್‌ನಲ್ಲಿರುತ್ತವೆ ಎಂದು ಇತ್ತೀಚಿನ ಸಂಶೋಧನಾ ವರದಿ ಉಲ್ಲೇಖಿಸಿದೆ.