ರೋಗಿಗಳಿಗೆ ಸಿಹಿಸುದ್ದಿ : ಮಧುಮೇಹ ಪ್ರಮುಖ ಔಷಧ ಬೆಲೆ ಶೇ.90ರಷ್ಟು ಇಳಿಕೆ -ಲಕ್ಷಾಂತರ ರೋಗಿಗಳಿಗೆ ಅನುಕೂಲ

| N/A | Published : Mar 14 2025, 12:31 AM IST / Updated: Mar 14 2025, 07:13 AM IST

ಸಾರಾಂಶ

 ಮಧುಮೇಹ ರೋಗಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಮಧುಮೇಹಿಗಳು ಪ್ರಮುಖವಾಗಿ ಬಳಸುವ ಎಂಪಾಗ್ಲಿಫ್ಲೋಜಿನ್‌ ಮಾತ್ರೆಯ ಬೆಲೆ ಶೇ.90ರಷ್ಟು ಕಡಿತವಾಗಿದೆ. ಈ ಮೊದಲು 1 ಮಾತ್ರೆಗೆ 60 ರು. ಇದ್ದ ದರ ಇದೀಗ ಕೇವಲ 5 ರು. ಆಸುಪಾಸಿಗೆ ಬಂದಿದೆ.

ನವದೆಹಲಿ: ಮಧುಮೇಹ ರೋಗಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಮಧುಮೇಹಿಗಳು ಪ್ರಮುಖವಾಗಿ ಬಳಸುವ ಎಂಪಾಗ್ಲಿಫ್ಲೋಜಿನ್‌ ಮಾತ್ರೆಯ ಬೆಲೆ ಶೇ.90ರಷ್ಟು ಕಡಿತವಾಗಿದೆ. ಈ ಮೊದಲು 1 ಮಾತ್ರೆಗೆ 60 ರು. ಇದ್ದ ದರ ಇದೀಗ ಕೇವಲ 5 ರು. ಆಸುಪಾಸಿಗೆ ಬಂದಿದೆ.

ಹೌದು. ಎಂಪಾಗ್ಲಿಫ್ಲೋಜಿನ್‌ ಔಷಧದ ಮೇಲೆ ತಯಾರಿಕಾ ಕಂಪನಿಯಾದ ಬೋರಿಂಜರ್‌ ಇಂಗ್ಲ್‌ಹೈಂ (ಬಿಐ) ಹೊಂದಿದ್ದ ಪೇಟೆಂಟ್‌ ಅವಧಿ ಮುಕ್ತಾಯವಾಗಿದೆ. ಹೀಗಾಗಿ ಹಲವು ಕಂಪನಿಗಳು ಇದರ ಜನೆರಿಕ್‌ ಮಾದರಿಯ ಔಷಧಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರಿಂದ ಭಾರತದಲ್ಲಿ ಲಕ್ಷಾಂತರ ರೋಗಿಗಳಿಗೆ ಅನುಕೂಲವಾಗಲಿದೆ.

ದೆಹಲಿ ಮೂಲದ ಮ್ಯಾನ್‌ಕೈಂಡ್‌ ಫಾರ್ಮಾ 1 ಮಾತ್ರೆಗೆ 5.5 ರು.ನಿಂದ 13.5 ರು.ವರೆಗೆ ಇರಿಸಿದ್ದು, ಮುಂಬೈ ಮೂಲದ ಗ್ಲೆನ್‌ಮಾರ್ಕ್‌ 11 ರು.ನಿಂದ 15 ರು.ವರೆಗೆ ಬೆಲೆ ಇರಿಸಿದೆ. ಇನ್ನು ಆಲ್ಕೆಂ ಕಂಪನಿಯು ಮಾರುಕಟ್ಟೆ ದರಕ್ಕಿಂತ ಶೇ.80 ಕಡಿಮೆ ಬೆಲೆ ಇರಿಸಿದೆ.