ಸಾರಾಂಶ
ಹೈದರಾಬಾದ್: ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ ಆರೋಪದ ಮೇಲೆ ನಟ ಪ್ರಕಾಶ್ ರಾಜ್, ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ನಟಿ ಪ್ರಣೀತಾ, ಲಕ್ಷ್ಮೀ ಮಂಚು, ನಿಧಿ ಅಗರ್‌ವಾಲ್ ಹಾಗೂ 19 ಸಾಮಾಜಿಕ ಮಾಧ್ಯಮ ಇನ್‌ಫ್ಲ್ಯುಯೆನ್ಸರ್‌ಗಳ ವಿರುದ್ಧ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸೆಲೆಬ್ರಿಟಿಗಳು ಮತ್ತು ಇನ್‌ಫ್ಲ್ಯುಯೆನ್ಸರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಪಾಪ್- ಅಪ್ ಜಾಹೀರಾತು ಸೇರಿದಂತೆ ಇತರ ಅಪ್ಲಿಕೇಶನ್‌ಗಳ ಮೂಲಕ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಿಯಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇತ್ತೀಚೆಗೆ ನಾನು ಕೆಲವೊಂದು ಯುವಕರ ಜೊತೆ ಮಾತನಾಡಿದದ ವೇಳೆ ಅವರೆಲ್ಲಾ ಬೆಟ್ಟಿಂಗ್, ಗ್ಯಾಂಬ್ಲಿಂಗ್ ಮತ್ತು ಕ್ಯಾಸಿನೋ ಆ್ಯಪ್‌ಗಳಲ್ಲಿ ಹಣ ಹೂಡುವ ಮಾತುಗಳನ್ನು ಆಡಿದ್ದರು. ನಾನು ಕೂಡಾ ಇಂಥ ಆ್ಯಪ್‌ಗಳ ಪ್ರಭಾವಕ್ಕೆ ಒಳಗಾಗಿ ಅವುಗಳ ಮೇಲೆ ಹಣ ಹೂಡುವವನಿದ್ದೆ. ಆದರೆ ಮನೆಯವರ ಸಲಹೆ ಪರಿಣಾಮ ದೂರ ಸರಿದೆ. ಆದರೆ ಬಹಳಷ್ಟು ಯುವಕರು, ಇಂಥ ಪ್ರಭಾವಿಗಳ ಪ್ರಭಾವಕ್ಕೆ ಒಳಗಾಗಿ ಹಣ ಹೂಡುತ್ತಿದ್ದಾರೆ ಎಂದು ಉದ್ಯಮಿಯೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆ ಬಿಎನ್‌ಎಸ್ ಕಾನೂನಿನಡಿ ಪ್ರಕರಣ ದಾಖಲಿಸಿಕೊಂಡಿದ್ದು, ಶೀಘ್ರವೇ ಅವರಿಗೆ ನೋಟಿಸ್ ನೀಡಲು ನಿರ್ಧರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ನಾನು ಕೆಲ ವರ್ಷಗಳ ಹಿಂದೆ ಆ್ಯಪ್ ಪರ ಪ್ರಚಾರ ಮಾಡಿದ್ದೆ. ಈಗ ಅಂಥ ಯಾವುದೇ ಪ್ರಚಾರ ನಡೆಸುತ್ತಿಲ್ಲ ಎಂದು ನಟ ಪ್ರಕಾಶ್ ರಾಜ್ ಸ್ಪಷ್ಟಪಡಿಸಿದ್ದಾರೆ.