ಸಾರಾಂಶ
ನವದೆಹಲಿ: ಹಿಂದಿ ಭಾಷೆ ಹೇರಿಕೆ ವಿಚಾರವಾಗಿ ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಸಮರ ನಡೆಯುತ್ತಿರುವ ಹೊತ್ತಿನಲ್ಲಿಯೇ ಕೇಂದ್ರ ಸಚಿವ ಅಮಿತ್ ಶಾ ಅವರು, ಡಿಸೆಂಬರ್‌ನಿಂದ ಕರ್ನಾಟಕ ಸೇರಿದಂತೆ ಆಯಾ ರಾಜ್ಯಗಳ ಜತೆ ಅಧಿಕೃತ ಸಂವಹನವನ್ನು ಸ್ಥಳೀಯ ಭಾಷೆಯಲ್ಲಿಯೇ ನಡೆಸಲಾಗುತ್ತದೆ ಎಂದು ಘೋಷಿಸಿದ್ದಾರೆ.
ಶುಕ್ರವಾರ ರಾಜ್ಯಸಭೆಯಲ್ಲಿ ಸ್ಥಳೀಯ ಭಾಷೆ ವಿಚಾರವಾಗಿ ಕೇಂದ್ರ ಸರ್ಕಾರದ ಬದ್ಧತೆಯನ್ನು ಎತ್ತಿ ಹಿಡಿದು ಮಾತನಾಡಿದ ಶಾ, ‘ಡಿಸೆಂಬರ್‌ನಿಂದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಸಂಸದರು ಮತ್ತು ಜನಸಾಮಾನ್ಯರ ಜೊತೆಗಿನ ಅಧಿಕೃತ ಪತ್ರ ವ್ಯವಹಾರಗಳನ್ನು ಸ್ಥಳೀಯ ಭಾಷೆಯಲ್ಲೇ ಮಾಡಲಾಗುವುದು’ ಎಂದು ಘೋಷಿಸಿದರು.
ಜೊತೆಗೆ ಸ್ಥಳೀಯ ಭಾಷೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜಭಾಷಾ ವಿಭಾಗದಲ್ಲಿ ಹೊಸ ಇಲಾಖೆಯನ್ನು ತೆರೆಯಲಾಗಿದೆ. ಅದರ ಅಡಿಯಲ್ಲಿ ಅನುವಾದಕ್ಕೆ ಅನುಕೂಲವಾಗಲು ಆ್ಯಪ್‌ಗಳನ್ನು ಬಿಡುಗಡೆ ಮಾಡಲಾಗುವುದು. ಭಾರತದ ಪ್ರತಿ ಭಾಷೆಯೂ ವಿಶೇಷವಾಗಿದ್ದು, ಅವುಗಳು ದೇಶದ ಸಂಸ್ಕೃತಿಯನ್ನು ಸಾರುತ್ತವೆ ಎಂದು ಅಮಿತ್ ಶಾ ಹೇಳಿದರು.
ಡಿಸೆಂಬರ್‌ನಿಂದ ಸ್ಥಳೀಯ ಭಾಷೆಯಲ್ಲಿ ಸಂವಹನ: ಸಚಿವ
ಇತ್ತೀಚೆಗೆ ರಾಜ್ಯಗಳ ಮೇಲೆ ಹಿಂದಿ ಹೇರಲಾಗುತ್ತಿದೆ ಎಂಬ ಕೂಗು
ತಮಿಳ್ನಾಡು ಸೇರಿ ಕೆಲವು ರಾಜ್ಯಗಳಿಂದ ಹಿಂದಿ ಹೇರಿಕೆಗೆ ವಿರೋಧ
ಇದಕ್ಕೆ ರಾಜ್ಯಸಭೆಯಲ್ಲಿ ತಿರುಗೇಟು ನೀಡಿದ ಗೃಹ ಸಚಿವ ಶಾ
ವರ್ಷಾಂತ್ಯಕ್ಕೆ ರಾಜ್ಯಗಳ ಭಾಷೆಯಲ್ಲೇ ಗೃಹ ಇಲಾಖೆ ಪತ್ರ ವ್ಯವಹಾರ
ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಲಾಗುವುದು: ಗೃಹ ಸಚಿವ ಘೋಷಣೆ