ಸಾರಾಂಶ
ಅಮರಾವತಿ: ತೆಲಂಗಾಣದ ಬಳಿಕ ಆಂಧ್ರಪ್ರದೇಶದಲ್ಲೂ ಎಸ್ಸಿ (ಪರಿಶಿಷ್ಟ ಜಾತಿ) ಒಳಮೀಸಲು ಜಾರಿಗೊಳಿಸಲಾಗಿದೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಳಮೀಸಲಾತಿಗೆ ಅನುಕೂಲವಾಗಿಸಲು ಆಂಧ್ ಸರ್ಕಾರವು ಎಸ್‌ಸಿಯಲ್ಲಿ 3 ಗುಂಪುಗಳಾಗಿ ವರ್ಗೀಕರಿಸಿ ಗುರುವಾರ ಸುಗ್ರೀವಾಜ್ಞೆ ಹೊರಡಿಸಿದೆ.
ಈ ಮೂಲಕ ಎಸ್ಸಿ ಒಳಮೀಸಲು ತಂದ 2ನೇ ರಾಜ್ಯವಾಗಿ ಆಂಧ್ರ ಹೊರಹೊಮ್ಮಿದೆ. ಸಿಎಂ ಚಂದ್ರಬಾಬು ನಾಯ್ಡು ಅಧ್ಯಕ್ಷತೆಯ ಸಚಿವ ಸಂಪುಟ ಪರಿಶಿಷ್ಟ ಜಾತಿಯ ವರ್ಗೀಕರಣವನ್ನು ಅನುಮೋದಿಸಿದೆ.
ಪರಿಶಿಷ್ಟ ಜಾತಿಯಲ್ಲಿ ಒಟ್ಟು 59 ಜಾತಿಗಳಿದ್ದು ಇವುಗಳನ್ನು 3 ಗುಂಪುಗಳಾಗಿ ವಿಂಗಡಿಸಲಾಗಿದೆ. ಇವುಗಳ
ಮೊದಲ ಗುಂಪಿನಲ್ಲಿ ಚಂಡಾಲಾ, ಪಕಿ, ರೆಲ್ಲಿ, ಡೋಮೆ ಸೇರಿ ಒಟ್ಟು 12 ಜಾತಿಗಳಿದ್ದು, ಇವುಗಳಿಗೆ ಶೇ.1 ಮೀಸಲಾತಿ ಕಲ್ಪಿಸಲಾಗಿದೆ.
2ನೇ ಗುಂಪಿನಲ್ಲಿ ಚಮಾರ್, ಮಾದಿಗ, ಸಿಂದೋಲಾ, ಮಾತಂಗಿ ಮತ್ತು ಇತರೆ ಜಾತಿಗಳಿಗೆ 6.5 ಮೀಸಲಾತಿ ನೀಡಲಾಗಿದೆ.
3ನೇ ಗುಂಪಿನಲ್ಲಿ ಮಾಲಾ, ಆದಿ ಆಂಧ್ರ, ಪಂಚಮ ಮತ್ತು ಉಪಜಾತಿಗಳಿಗೆ 7.5 ಮೀಸಲಾತಿಯನ್ನು ಘೋಷಿಸಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.