ಸಾರಾಂಶ
ಡೊನಾಲ್ಡ್ ಟ್ರಂಪ್ ‘ರಷ್ಯಾ ಭೂಪ್ರದೇಶದ ತೀರಾ ಒಳ ನುಗ್ಗಿ ರಾಜಧಾನಿ ಮಾಸ್ಕೋ ಮೇಲೆ ದಾಳಿ ನಡೆಸಿದರೆ ನೆರವು ನೀಡುತ್ತೇವೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ಅವರಿಗೆ ಖಾಸಗಿಯಾಗಿ ಪ್ರೋತ್ಸಾಹ ನೀಡಿದ್ದಾರೆ ಎಂದು ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ವರದಿ
ವಾಷಿಂಗ್ಟನ್ : ‘ಯುದ್ಧ ನಿಲ್ಲಿಸಿ’ ಎಂದು ಒಂದು ಕಡೆ ಕರೆ ನಿಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮತ್ತೊಂದೆಡೆ ‘ರಷ್ಯಾ ಭೂಪ್ರದೇಶದ ತೀರಾ ಒಳ ನುಗ್ಗಿ ರಾಜಧಾನಿ ಮಾಸ್ಕೋ ಮೇಲೆ ದಾಳಿ ನಡೆಸಿದರೆ ನೆರವು ನೀಡುತ್ತೇವೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ಅವರಿಗೆ ಖಾಸಗಿಯಾಗಿ ಪ್ರೋತ್ಸಾಹ ನೀಡಿದ್ದಾರೆ ಎಂದು ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
‘ಒಂದು ವೇಳೆ ಅಮೆರಿಕವು ಬಹುದೂರ ದಾಳಿ ಮಾಡಬಲ್ಲ ಕ್ಷಿಪಣಿಗಳನ್ನುನೀಡಿದರೆ ಮಾಸ್ಕೋ ಮೇಲೆ ದಾಳಿ ಮಾಡಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ‘ನೀಡಿ ನೊಡೋಣ’ ಎಂದು ಜೆಲೆನ್ಸ್ಕಿ ಉತ್ತರಿಸಿದ್ದಾರೆ. ಆಗ ಟ್ರಂಪ್ ಪ್ರತಿಕ್ರಿಯೆ ನೀಡಲಿಲ್ಲ ಎಂದು ವರದಿ ಹೇಳಿದೆ. ಜು.4ರಂದು ಉಭಯ ನಾಯಕರ ನಡುವೆ ಈ ಮಾತುಕತೆ ನಡೆದಿದ್ದು, ಈ ಸಭೆ ಕುರಿತು ವಿವರಣೆ ನೀಡಲಾದ ವ್ಯಕ್ತಿಗಳನ್ನು ಆಧರಿಸಿ ಪತ್ರಿಕೆ ವರದಿ ಮಾಡಿದೆ.
ಈ ಮೂಲಕ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಿಂದ ಅಂತರ ಕಾಯ್ದುಕೊಳ್ಳುವ ಟ್ರಂಪ್ ಅವರ ಹಿಂದಿನ ನಿಲುವಿನಲ್ಲಿ ಭಾರೀ ಬದಲಾವಣೆಯಾದಂತಾಗಿದೆ. ಇತ್ತೀಚೆಗಷ್ಟೇ ಟ್ರಂಪ್ ಅವರು ಉಕ್ರೇನ್ ಜತೆಗಿನ ಸಂಘರ್ಷವನ್ನು ಮುಗಿಸಲು ರಷ್ಯಾಗೆ 50 ದಿನಗಳ ಗುಡುವು ನೀಡಿದ್ದರು. ತಪ್ಪಿದಲ್ಲಿ ಶೇ.100 ತೆರಿಗೆ ಸೇರಿ ಹೊಸ ಆರ್ಥಿಕ ನಿರ್ಬಂಧಗಳನ್ನು ಎದುರಿಸಲು ಸಿದ್ಧವಾಗಬೇಕು ಎಂದು ರಷ್ಯಾಗೆ ಎಚ್ಚರಿಸಿದ್ದರು. ಅದಕ್ಕೆ ರಷ್ಯಾ ಡೋಂಟ್‌ಕೇರ್ ಎಂದ ಬೆನ್ನಲ್ಲೇ, ರಷ್ಯಾದ ಮೇಲೆ ಒತ್ತಡ ಹೇರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹೊಸ ತಂತ್ರ ಬಳಸಿದ್ದಾರೆ.
ಉಕ್ರೇನ್ ಮೇಲಿನ ಯುದ್ಧ ನಿಲ್ಲಿಸದಿದ್ದರೆ ರಷ್ಯಾಗೆ ಶೇ.100ರಷ್ಟು ಹೆಚ್ಚಿನ ತೆರಿಗೆ ಬೆದರಿಕೆ ಹಾಕಿದ್ದ ಟ್ರಂಪ್
ಟ್ರಂಪ್ ಬೆದರಿಕೆಗೆ ರಷ್ಯಾ ಡೋಂಟ್ ಕೇರ್ ಎಂದ ಬೆನ್ನಲ್ಲೇ ಎದುರಾಳಿ ಮಣಿಸಲು ಹೊಸ ತಂತ್ರ
ಮಾಸ್ಕೋ, ಸೇಂಟ್ ಪೀಟರ್ಸ್‌ಬರ್ಗ್ ಮೇಲೆ ದಾಳಿ ನಡೆಸೋದಾದ್ರೆ ನಾವು ಶಸ್ತ್ರಾಸ್ತ್ರ ಕೊಡ್ತೀವಿ ಎಂದ ಟ್ರಂಪ್
ಟ್ರಂಪ್ ಸಲಹೆ ಬಗ್ಗೆ ಅಧ್ಯಕ್ಷ ಜೆಲೆನ್ಸ್ಕಿ ಪೂರಕ ಪ್ರತಿಕ್ರಿಯೆ. ಶಸ್ತ್ರಾಸ್ತ್ರ ನೀಡಿದರೆ ದಾಳಿ ಬಗ್ಗೆ ಪರಿಶೀಲನೆ