ಸಾರಾಂಶ
ರಕ್ಷ ಣಾತ್ಮಕ ಆಟಕ್ಕೆ ಸಾಕ್ಷಿಯಾದ ಬೆಂಗಳೂರು ಬುಲ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಹೈವೋಲ್ಟೇಜ್ ಹಣಾಹಣಿಯಲ್ಲಿ ಮಾಜಿ ಚಾಂಪಿಯನ್ ಬುಲ್ಸ್ ತಂಡ 28-24 ಅಂಕಗಳಿಂದ ಜಯಭೇರಿ ಬಾರಿಸಿತು. ಆ ಮೂಲಕ ಈ ಆವೃತ್ತಿಯಲ್ಲಿ 5ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿಯಿತು.
ಪ್ರೊ ಕಬಡ್ಡಿ: ಗುಜರಾತ್ ವಿರುದ್ಧ 28-24 ಜಯಜೈಪುರ: ರಕ್ಷ ಣಾತ್ಮಕ ಆಟಕ್ಕೆ ಸಾಕ್ಷಿಯಾದ ಬೆಂಗಳೂರು ಬುಲ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಹೈವೋಲ್ಟೇಜ್ ಹಣಾಹಣಿಯಲ್ಲಿ ಮಾಜಿ ಚಾಂಪಿಯನ್ ಬುಲ್ಸ್ ತಂಡ 28-24 ಅಂಕಗಳಿಂದ ಜಯಭೇರಿ ಬಾರಿಸಿತು. ಆ ಮೂಲಕ ಈ ಆವೃತ್ತಿಯಲ್ಲಿ 5ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿಯಿತು.
ಮೊದಲ 3 ಪಂದ್ಯಗಳಲ್ಲಿ ಸೋಲುಂಡಿದ್ದ ಬುಲ್ಸ್, ಆ ಬಳಿಕ ಸತತ 4 ಜಯ ಸಾಧಿಸಿತ್ತು. ಆದರೆ ಕಳೆದ ಪಂದ್ಯದಲ್ಲಿ ತಂಡ ಸೋಲುಂಡಿತ್ತು. ಇದೀಗ ಜಯದ ಹಳಿಗೆ ವಾಪಸಾಗಿದೆ. ಇದೇ ವೇಳೆ ಜೈಂಟ್ಸ್ 6ನೇ ಸೋಲಿಗೆ ಗುರಿಯಾಗಿ ಕೊನೆ ಸ್ಥಾನದಲ್ಲಿದೆ.ಮೊದಲಾರ್ಧದಲ್ಲಿ 2 ಬಾರಿ ಆಲೌಟ್ ಆಗುವುದನ್ನು ತಪ್ಪಿಸಿಕೊಂಡ ಬುಲ್ಸ್ 20 ನಿಮಿಷಗಳ ಆಟದ ಮುಕ್ತಾಯಕ್ಕೆ 17-13ರ ಮುನ್ನಡೆ ಗಳಿಸಿತು. ದ್ವಿತೀಯಾರ್ಧದಲ್ಲೂ ಉತ್ತಮ ಡಿಫೆನ್ಸ್ ಪ್ರದರ್ಶಿಸಿದ ಬುಲ್ಸ್ 4 ಅಂಕಗಳ ಜಯ ಸಾಧಿಸಿತು. ಬುಲ್ಸ್ ಪರ ರೈಡರ್ ಆಕಾಶ್ ಶಿಂಧೆ 7 ಅಂಕ ಗಳಿಸಿದರೆ, ನಾಯಕ ಯೋಗೇಶ್ 6 ಟ್ಯಾಕಲ್ ಅಂಕ ಪಡೆದರು. ಬುಲ್ಸ್ ತನ್ನ ಮುಂದಿನ ಪಂದ್ಯವನ್ನು ಸೆ.25ರಂದು ಯು.ಪಿ.ಯೋಧಾಸ್ ವಿರುದ್ಧ ಆಡಲಿದೆ.
ಸೋಮವಾರದ 2ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಯು.ಪಿ.ಯೋಧಾಸ್ 00-00 ಅಂಕಗಳಲ್ಲಿ ಜಯಿಸಿತು.