ವಿಶ್ವಾಸಮತ ಗೆದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌

| Published : Feb 18 2024, 01:33 AM IST / Updated: Feb 18 2024, 08:21 AM IST

Aravind Kejriwal
ವಿಶ್ವಾಸಮತ ಗೆದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಉರುಳಿಸಲು ವಿಧಾನಸಭೆ ಬಿಜೆಪಿ ಅಪ್ಪನ ಆಸ್ತಿಯಲ್ಲ ಎಂದು ಅರವಿಂದ್‌ ಕೇಜ್ರಿವಾಲ್‌ ಕಿಡಿ ಕಾರಿದ್ದಾರೆ.

ನವದೆಹಲಿ: ವಿಶ್ವಾಸಮತ ನಿರ್ಣಯ ಮಂಡಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಶನಿವಾರ ವಿಧಾನಸಭೆಯಲ್ಲಿ ಸಂಪೂರ್ಣ ಬಹುಮತವನ್ನು ಸಾಬೀತುಪಡಿಸಿದರು.

ಈ ಮೂಲಕ ದೆಹಲಿ ಸರ್ಕಾರ ಶೀಘ್ರದಲ್ಲೇ ಬಿದ್ದು ಹೋಗಲಿದೆ ಎಂಬ ವದಂತಿಗಳಿಗೆ ಕೇಜ್ರಿವಾಲ್‌ ತಿರುಗೇಟು ನೀಡಿದ್ದಾರೆ.

ಸದನವು ಧ್ವನಿ ಮತದ ಮೂಲಕ ವಿಶ್ವಾಸದ ನಿರ್ಣಯವನ್ನು ಅಂಗೀಕರಿಸಿತು.

ಮತದಾನದ ಸಮಯದಲ್ಲಿ ಎಎಪಿಯ 62 ಶಾಸಕರ ಪೈಕಿ 54 ಮಂದಿ ಉಪಸ್ಥಿತರಿದ್ದರು.

ವಿಶ್ವಾಸಮತ ನಿರ್ಣಯದ ಬಳಿಕ ಮಾತನಾಡಿದ ಕೇಜ್ರಿವಾಲ್‌ ‘ಬಿಜೆಪಿ ನಮ್ಮ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿದೆ ಆದರೆ ವಿಧಾನಸಭೆ ಏನು ಅವರ ಅಪ್ಪನ ಆಸ್ತಿಯಲ್ಲ’ ಎಂದು ಕಿಡಿಕಾರಿದರು, ಅಲ್ಲದೇ ‘ನಮ್ಮ ಸರ್ಕಾರಕ್ಕೆ ಬಹುಮತವಿದೆ.

ಆದರೆ ಬಿಜೆಪಿಯು ನಮ್ಮ ಪಕ್ಷದ ಶಾಸಕರನ್ನು ಸೆಳೆದು ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿರುವ ಕಾರಣ ವಿಶ್ವಾಸಮತ ಯಾಚಿಸಬೇಕಾಯಿತು’ ಎಂದರು.