ಸಾರಾಂಶ
ದೆಹಲಿಯಲ್ಲಿ ಸರಕು ಸಾಗಾಣಿಕೆ ರೈಲೊಂದು ಹಳಿ ತಪ್ಪಿದ ಪರಿಣಾಮ ಪಕ್ಕದಲ್ಲೇ ಚಿಂದಿ ಆಯುತ್ತಿದ್ದ ವೃದ್ಧನಿಗೆ ಬಡಿದು ಸಾವನ್ನಪ್ಪಿದ್ದಾನೆ.
ನವದೆಹಲಿ: ಚಂಡೀಗಢಕ್ಕೆ ತೆರಳುತ್ತಿದ್ದ ಗೂಡ್ಸ್ ರೈಲು ದೆಹಲಿಯ ಸರಾಯ್ ರೊಹಿಲ್ಲಾ ರೈಲು ನಿಲ್ದಾಣದ ಬಳಿ ಹಳಿ ತಪ್ಪಿ 10 ಬೋಗಿಗಳು ಮಗುಚಿದೆ.
ಪರಿಣಾಮ ಹಳಿ ಬದಿಯಲ್ಲಿ ಚಿಂದಿ ಆಯುತ್ತಿದ್ದ 70 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.
ಮುಂಬೈನಿಂದ ದೆಹಲಿಗೆ ಸ್ಟೀಲ್‌ಗಳನ್ನು ಹೊತ್ತೊಯ್ಯುತ್ತಿದ್ದ ಗೂಡ್ಸ್ ರೈಲು ಮಧ್ಯಾಹ್ನದ ವೇಳೆಗೆ ಹಳಿ ತಪ್ಪಿತು.
ಪರಿಣಾಮವಾಗಿ ಅದರ 10 ಬೋಗಿಗಳು ಮಗುಚಿ ಬಿದ್ದಿತು. ಇದರಿಂದಾಗಿ ಕಾಂಟ್ರಾಕ್ಟ್ ಆಧಾರದಲ್ಲಿ ಚಿಂದಿ ಆಯುತ್ತಿದ್ದ ರಫೀಕ್ ಸಾವನ್ನಪ್ಪಿದ್ದಾರೆ.
ಮೇಲ್ನೋಟಕ್ಕೆ ಅಪಘಾತದಲ್ಲಿ ಯಾವುದೇ ಕಾನೂನು ಬಾಹೀರ ಕೃತ್ಯ ಕಂಡುಬಂದಿಲ್ಲ. ತನಿಖೆ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.