ಮಣ್ಣಿನಡಿ ನನ್ನವರಿರಬಹುದು, ಮೆಲ್ಲಗೆ ಅಗೆಯಿರಿ.... ವಯನಾಡಿನ ದುರಂತದ ಮನಕಲಕುವ ಅನುಭವ

| Published : Aug 06 2024, 12:33 AM IST / Updated: Aug 06 2024, 06:17 AM IST

ಸಾರಾಂಶ

ಭೂಕುಸಿತದಿಂದಾಗಿ ಮಣ್ಣಿನಡಿ ಸಿಲುಕಿದ ದೇಹಗಳನ್ನು ಹೊರತೆಗೆಯುವ ಕಾರ್ಯದಲ್ಲಿ ತೊಡಗಿರುವವರ ತಂಡ ಅಲ್ಲಿನ ಮನಕಲಕುವ ಅನುಭವಗಳನ್ನು ತೆರೆದಿಟ್ಟಿದ್ದಾರೆ.

ವಯನಾಡ್: ಭೂಕುಸಿತದಿಂದಾಗಿ ಮಣ್ಣಿನಡಿ ಸಿಲುಕಿದ ದೇಹಗಳನ್ನು ಹೊರತೆಗೆಯುವ ಕಾರ್ಯದಲ್ಲಿ ತೊಡಗಿರುವವರ ತಂಡ ಅಲ್ಲಿನ ಮನಕಲಕುವ ಅನುಭವಗಳನ್ನು ತೆರೆದಿಟ್ಟಿದ್ದಾರೆ.

ಮಣ್ಣಿನಡಿ ಏನಿದೆ ಎಂದು ತಿಳಿಯದ ಕಾರಣ ಹಿಟಾಚಿ ಸೇರಿದಂತ ಇತರ ಯಂತ್ರಗಳನ್ನು ಎಚ್ಚರಿಕೆಯಿಂದ ಮುನ್ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ‘ನನ್ನ ಬಳಿ ಬಂದ ಯುವಕನೊಬ್ಬ ತನ್ನ ಮನೆಯತ್ತ ಬೊಟ್ಟುಮಾಡುತ್ತ, ಅವಶೇಷಗಳಡಿಯಲ್ಲಿ ತನ್ನ ಪರಿವಾರದವರು ಇರಬಹುದಾದ ಕಾರಣ ಮೆಲ್ಲನೆ ಅಗೆಯುವಂತೆ ವಿನಂತಿಸಿದ. 

ನಾನು ಯಂತ್ರ ಚಲಾಯಿಸಿದಂತೆ ಆತ ಹನಿಗಣ್ಣಾದ’ ಎಂದು ಓರ್ವ ಆಪರೇಟರ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಆ ಬಗ್ಗೆ ಮಾತನಾಡಿದ ಇನ್ನೊಬ್ಬ ಆಪರೇಟರ್, ‘ಜನರ ಅವಶೇಷಗಳನ್ನು ಹುಡುಕಿ ತೆಗೆಯುವ ಬಹಳ ದೊಡ್ಡ ಜವಾಬ್ದಾರಿ ನನ್ನದಾಗಿತ್ತು’ ಎಂದಿದ್ದಾರೆ.