ಗಂಗೋತ್ರಿ ದೇವಸ್ಥಾನಕ್ಕೆ ತೆರಳುತ್ತಿದ್ದ ಖಾಸಗಿ ಕಂಪನಿಯ ಹೆಲಿಕಾಪ್ಟರ್‌ ಗುರುವಾರ ಉತ್ತರಕಾಶಿ ಜಿಲ್ಲೆಯ ಗಂಗಾನಿ ಬಳಿ ಕಂದಕಕ್ಕೆ ಉರುಳಿ ಪತನಗೊಂಡ ಘಟನೆ ನಡೆದಿದೆ. ದುರಂತದಲ್ಲಿ ಪೈಲಟ್‌ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದು ಓರ್ವ ಗಂಭೀರ ಗಾಯಗೊಂಡಿದ್ದಾರೆ.

 ಉತ್ತರಕಾಶಿ: ಗಂಗೋತ್ರಿ ದೇವಸ್ಥಾನಕ್ಕೆ ತೆರಳುತ್ತಿದ್ದ ಖಾಸಗಿ ಕಂಪನಿಯ ಹೆಲಿಕಾಪ್ಟರ್‌ ಗುರುವಾರ ಉತ್ತರಕಾಶಿ ಜಿಲ್ಲೆಯ ಗಂಗಾನಿ ಬಳಿ ಕಂದಕಕ್ಕೆ ಉರುಳಿ ಪತನಗೊಂಡ ಘಟನೆ ನಡೆದಿದೆ. ದುರಂತದಲ್ಲಿ ಪೈಲಟ್‌ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದು ಓರ್ವ ಗಂಭೀರ ಗಾಯಗೊಂಡಿದ್ದಾರೆ. 

ಏರೋಟ್ರಾನ್ಸ್‌ ಸರ್ವಿಸಸ್‌ ಪ್ರೈವೇಟ್‌ ಲಿ. ಎನ್ನುವ ಖಾಸಗಿ ಕಂಪನಿಯ ಹೆಲಿಕಾಪ್ಟರ್‌ನಲ್ಲಿ 7 ಜನರು ಗಂಗೋತ್ರಿ ದೇವಸ್ಥಾನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ದುರಂತ ಸಂಭವಿಸಿದೆ.

 ಇಲ್ಲಿನ ಋಷಿಕೇಶ- ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಮಾನ ಅಪಘಾತಕ್ಕೀಡಾಗಿ ಸುಮಾರು 200-250 ಮೀ. ಆಳದ ಕಂದಕ್ಕೆ ಉರುಳಿದೆ. ಘಟನೆಯಲ್ಲಿ ಐವರು ಮಹಿಳಾ ಯಾತ್ರಿಕರು, ಓರ್ವ ಪೈಲಟ್ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 ಹೆಲಿಕಾಪ್ಟರ್‌ ಮೂವರು ಮುಂಬೈ, ಇಬ್ಬರು ಆಂಧ್ರಪ್ರದೇಶ, ತಲಾ ಒಬ್ಬರು ಉತ್ತರಪ್ರದೇಶ ಮತ್ತು ಗುಜರಾತ್‌ ಮೂಲದವರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.