ಸಾರಾಂಶ
ಭಾರತದ ಐಟಿ ಸೇವೆಗಳು, ಬಿಪಿಒ ಮತ್ತು ಕನ್ಸಲ್ಟಿಂಗ್ ಹಾಗೂ ಜಿಸಿಸಿ (ಗ್ಲೋಬಲ್ ಕೆಪ್ಯಾಬಿಲಿಟಿ ಸೆಂಟರ್)ಗಳ ಪಾಲಿಗೆ ತಲೆನೋವಾಗಬಹುದಾದ ವಿಧೇಯಕವೊಂದು ಅಮೆರಿಕದಲ್ಲಿ ಇದೀಗ ಸದ್ದಿಲ್ಲದೆ ಮಂಡನೆಯಾಗಿದೆ.
ವಾಷಿಂಗ್ಟನ್/ನವದೆಹಲಿ: ಭಾರತದ ಐಟಿ ಸೇವೆಗಳು, ಬಿಪಿಒ ಮತ್ತು ಕನ್ಸಲ್ಟಿಂಗ್ ಹಾಗೂ ಜಿಸಿಸಿ (ಗ್ಲೋಬಲ್ ಕೆಪ್ಯಾಬಿಲಿಟಿ ಸೆಂಟರ್)ಗಳ ಪಾಲಿಗೆ ತಲೆನೋವಾಗಬಹುದಾದ ವಿಧೇಯಕವೊಂದು ಅಮೆರಿಕದಲ್ಲಿ ಇದೀಗ ಸದ್ದಿಲ್ಲದೆ ಮಂಡನೆಯಾಗಿದೆ. ವಿದೇಶಿ ನೌಕರರು ಅಥವಾ ಕಂಪನಿಯಿಂದ ಪಡೆದುಕೊಳ್ಳುವ ಔಟ್‌ಸೋರ್ಸ್ (ಹೊರಗುತ್ತಿಗೆ) ಸೇವೆಗೆ ಪಾವತಿಸುವ ಹಣದ ಮೇಲೆ ಶೇ.25ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪ ಈ ವಿಧೇಯಕದಲ್ಲಿದೆ.
ಈ ಅಂತಾರಾಷ್ಟ್ರೀಯ ಉದ್ಯೋಗ ಸ್ಥಳಾಂತರ ತಡೆ ಕಾಯ್ದೆ (ಎಚ್‌ಐಆರ್‌ಇ) ವಿಧೇಯಕವನ್ನು ಅ.6ರಂದು ಓಹಾಯೋ ಸೆನೆಟರ್ ಬರ್ನಿ ಮೊರೆನೊ ಮಂಡಿಸಿದ್ದಾರೆ. ಈ ವಿಧೇಯಕವನ್ನು ಪರಿಶೀಲನೆಗಾಗಿ ಹಣಕಾಸಿಗೆ ಸಂಬಂಧಿಸಿದ ಸೆನೆಟ್ ಸಮಿತಿಗೆ ಕಳುಹಿಸಿಕೊಡಲಾಗಿದೆ.
ಭಾರತದ ಮೇಲೆ ಪರಿಣಾಮ?:
ವಿಧೇಯಕದ ಪ್ರಕಾರ ಅಮೆರಿಕದ ಯಾವುದೇ ವ್ಯಕ್ತಿ ಅಥವಾ ಕಂಪನಿ ಔಟ್‌ಸೋರ್ಸ್ ಸೇವೆಗಾಗಿ ವಿದೇಶದಲ್ಲಿರುವ ವ್ಯಕ್ತಿಗೆ ಹಣ ಪಾವತಿ ಮಾಡಿದರೆ ಆ ಹಣದ ಮೇಲೆ ಶೇ.25ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈ ವಿಧೇಯಕದ ದೊಡ್ಡ ಪರಿಣಾಮ ಭಾರತದ ಐಟಿ, ಬಿಪಿಒ ಮತ್ತಿತರ ಸೇವೆಗಳ ಮೇಲೆ ಆಗಲಿದೆ. ಭಾರತದ ಆರ್ಥಿಕತೆಗೆ ಈ ವಿಧೇಯಕದಿಂದ ಅಕ್ಷರಶಃ ಬೆಂಕಿ ಬೀಳಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಚ್ಚರಿಸಿದ್ದಾರೆ.
ಬ್ಲೂಕಾಲರ್ ಕೆಲಸಗಳನ್ನು ಬಿಟ್ಟುಕೊಡಬಾರದು ಎಂಬ ಮನಸ್ಥಿತಿ
‘ಹಾಲಿ ಇರುವ ರೂಪದಲ್ಲಿ ವಿಧೇಯಕವು ಪಾಸ್ ಆಗಬಹುದು ಅಥವಾ ಆಗದೇ ಇರಬಹುದು. ಆದರೆ ಒಂದಂತೂ ಸ್ಪಷ್ಟ. ಚೀನಾದಿಂದಾಗಿ ಈಗಾಗಲೇ ನಾವು ನಮ್ಮ ಬ್ಲೂಕಾಲರ್ ಕೆಲಸಗಳನ್ನು ಕಳೆದುಕೊಂಡಿದ್ದೇವೆ. ಇದೀಗ ಭಾರತಕ್ಕೆ ಆ ಬ್ಲೂಕಾಲರ್ ಕೆಲಸಗಳನ್ನು ಬಿಟ್ಟುಕೊಡಬಾರದು ಎಂಬ ಮನಸ್ಥಿತಿ ಅಮೆರಿಕನ್ನರಲ್ಲಿ ಹೆಚ್ಚಾಗುತ್ತಿದೆ’ ಎಂದು ಜೈರಾಂ ರಮೇಶ್ ಕಳವಳ ವ್ಯಕ್ತಪಡಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))