ಕಾಶ್ಮೀರದಲ್ಲೂ ಇಂಡಿಯಾ ಮೈತ್ರಿ ವಿಫಲ: ಪಿಡಿಪಿ, ಎನ್‌ಸಿ ಸ್ವತಂತ್ರ ಸ್ಪರ್ಧೆ

| Published : Apr 04 2024, 01:05 AM IST / Updated: Apr 04 2024, 05:48 AM IST

ಕಾಶ್ಮೀರದಲ್ಲೂ ಇಂಡಿಯಾ ಮೈತ್ರಿ ವಿಫಲ: ಪಿಡಿಪಿ, ಎನ್‌ಸಿ ಸ್ವತಂತ್ರ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಪಶ್ಚಿಮ ಬಂಗಾಳ, ಪಂಜಾಬ್‌ ಬಳಿಕ ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲೂ ಇಂಡಿಯಾಕೂಟದ ಮೈತ್ರಿ ವಿಫಲವಾಗಿದೆ.

ಶ್ರೀನಗರ: ಪಶ್ಚಿಮ ಬಂಗಾಳ, ಪಂಜಾಬ್‌ ಬಳಿಕ ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲೂ ಇಂಡಿಯಾಕೂಟದ ಮೈತ್ರಿ ವಿಫಲವಾಗಿದೆ. ರಾಜ್ಯದ 5 ಸ್ಥಾನಗಳಲ್ಲಿ ಸ್ಥಾನ ಹೊಂದಾಣಿಕೆ ವಿಷಯದಲ್ಲಿ ವಿಫಲವಾಗಿರುವ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ ಮತ್ತು ಫಾರುಖ್‌ ಅಬ್ದುಲ್ಲಾ ನೇತೃತ್ವದ ನ್ಯಾಷನಲ್‌ ಕಾನ್ಫರೆನ್ಸ್‌ ಪ್ರತ್ಯೇಕವಾಗಿ ಕಣಕ್ಕಿಳಿಯಲು ನಿರ್ಧರಿಸಿವೆ.

ಮೊದಲಿಗೆ ನ್ಯಾಷನಲ್‌ ಕಾನ್ಫರೆನ್ಸ್‌ ಉಪಾಧ್ಯಕ್ಷರಾದ ಓಮರ್‌ ಅಬ್ದುಲ್ಲಾ ಕಾಶ್ಮೀರದ ಎಲ್ಲ 3 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿ ಜಮ್ಮುವಿನ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವುದಾಗಿ ಘೋಷಿಸಿದ್ದರು. ಇದಕ್ಕೆ ಪ್ರತಿಯಾಗಿ ಪಿಡಿಪಿಯ ಮೆಹಬೂಬಾ ಮುಫ್ತಿ ಕೂಡ ಕಾಶ್ಮೀರದ ಎಲ್ಲ 3 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ. 

ಈ ನಡುವೆ ಶ್ರೀನಗರದ ಹಾಲಿ ಸಂಸದ ಫಾರೂಖ್‌ ಅಬ್ದುಲ್ಲಾ ಅನಾರೋಗ್ಯದ ಕಾರಣ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರಲು ತೀರ್ಮಾನಿಸಿದ್ದರೆ ಇತ್ತೀಚೆಗೆ ಕಾಂಗ್ರೆಸ್‌ ತ್ಯಜಿಸಿದ್ದ ಗುಲಾಂ ನಬಿ ಆಜಾ಼ದ್‌ ಅನಂತ್‌ನಾಗ್‌ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಕಾಶ್ಮೀರದಲ್ಲಿ ಮತದಾನ ಮೇ.13ರಿಂದ ಪ್ರಾರಂಭವಾಗಿ ಮೂರು ಹಂತಗಳಲ್ಲಿ ನಡೆಯಲಿದೆ.