ಸಾರಾಂಶ
ಅಮೆರಿಕದ ಅಧ್ಯಕ್ಷರಾದಾಗಿನಿಂದ, ‘ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ನಮ್ಮ ಮೇಲೆ ಅಧಿಕ ತೆರಿಗೆ ಹೇರುತ್ತಿದೆ’ ಎಂದು ಪದೇ ಪದೇ ಹೇಳಿ ಪ್ರತಿತೆರಿಗೆ ಬೆದರಿಕೆ ಒಡ್ಡುತ್ತಿರುವ ಟ್ರಂಪ್ ಅವರ ಘೋಷಣೆ ಜಾರಿಯ ಕ್ಷಣ ಸನ್ನಹಿತವಾಗಿದೆ. ಇದು, ಸಹಜವಾಗಿಯೇ ಭಾರತ ಸೇರಿ ಕೆಲ ದೇಶಗಳ ಆತಂಕಕ್ಕೆ ಕಾರಣವಾಗಿದೆ.
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾದಾಗಿನಿಂದ, ‘ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ನಮ್ಮ ಮೇಲೆ ಅಧಿಕ ತೆರಿಗೆ ಹೇರುತ್ತಿದೆ’ ಎಂದು ಪದೇ ಪದೇ ಹೇಳಿ ಪ್ರತಿತೆರಿಗೆ ಬೆದರಿಕೆ ಒಡ್ಡುತ್ತಿರುವ ಟ್ರಂಪ್ ಅವರ ಘೋಷಣೆ ಜಾರಿಯ ಕ್ಷಣ ಸನ್ನಹಿತವಾಗಿದೆ. ಇದು, ಸಹಜವಾಗಿಯೇ ಭಾರತ ಸೇರಿ ಕೆಲ ದೇಶಗಳ ಆತಂಕಕ್ಕೆ ಕಾರಣವಾಗಿದೆ.
‘ಏ.2ರಿಂದ ಅಧಿಕ ತೆರಿಗೆ ಹೇರುವ ದೇಶಗಳ ಮೇಲೆ ಭಾರೀ ತೆರಿಗೆ ಹೇರಲಾಗುವುದು ಹಾಗೂ ಇದು ಅಮೆರಿಕದ ಪಾಲಿಗೆ ದೊಡ್ಡ ಬದಲಾವಣೆಯಾಗುವುದು’ ಎಂದು ಟ್ರಂಪ್ ಘೋಷಿಸಿದ್ದರು. ಅದರ ಬೆನ್ನಲ್ಲೇ ತೆರಿಗೆ ಜಾರಿಯ ಮುನ್ನಾದಿನ ಮಾತನಾಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್, ‘ಬಹುಕಾಲದಿಂದ ಕೆಲ ದೇಶಗಳು ನಮ್ಮ ಮೇಲೆ ಅಧಿಕ ತೆರಿಗೆ ಹೇರಿ ಲಾಭ ಮಾಡಿಕೊಳ್ಳುತ್ತಿದ್ದವು. ಭಾರತ ಶೇ.100ರಷ್ಟು ತೆರಿಗೆ ಹಾಕುತ್ತಿತ್ತು. ಇದರಿಂದಾಗಿ ನಮ್ಮ ಕೃಷಿ ಉತ್ಪನ್ನಗಳು ಸೇರಿದಂತೆ ಅನ್ಯ ವಸ್ತುಗಳ ರಫ್ತಿಗೆ ತೊಂದರೆಯಾಗುತ್ತಿತ್ತು. ಆದ್ದರಿಂದ ಅಧ್ಯಕ್ಷರು ಪ್ರತಿತೆರಿಗೆಯ ನಿರ್ಧಾರ ಕೈಗೊಂಡಿದ್ದಾರೆ’ ಎಂದಿದ್ದಾರೆ.ಕಾಯತಂತ್ರ:
ಇತ್ತ ಅಮೆರಿಕದ ಪ್ರತಿತೆರಿಗೆಯಿಂದ ತಪ್ಪಿಸಿಕೊಳ್ಳಲು ಇರುವ ದಾರಿಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತದ ವಾಣಿಜ್ಯ ಇಲಾಖೆ ಕೆಲಸ ಮಾಡುತ್ತಿದೆ. ಜೊತೆಗೆ, ಈ ಸಂಬಂಧ ಉಭಯ ದೇಶಗಳ ಅಧಿಕಾರಿಗಳ ನಡುವೆ ಮಾತುಕತೆಗಳೂ ನಡೆಯುತ್ತಿವೆ.ಪ್ರಸ್ತುತ ಭಾರತದಲ್ಲಿ ಅಮೆರಿಕದ ವಸ್ತುಗಳ ಮೇಲೆ ಸರಾಸರಿ ಶೇ.77ರಷ್ಟು ತೆರಿಗೆ ಹೇರಲಾಗುತ್ತಿದ್ದು, ಭಾರತದ ಉತ್ಪನ್ನಗಳ ಮೇಲೆ ಅಮೆರಿಕದ ಶೇ.2.8ರಷ್ಟು ತೆರಿಗೆ ವಿಧಿಸುತ್ತಿದೆ. ಭಾರತ ಅಮೆರಿಕಕ್ಕೆ 30 ಕ್ಷೇತ್ರಗಳಿಗೆ ಸೇರಿದ ವಸ್ತುಗಳನ್ನು ರಫ್ತು ಮಾಡುತ್ತಿದೆ. ಇದರಲ್ಲಿ 6 ಕೃಷಿ ಸಂಬಂಧಿತವಾದರೆ, 24 ಕೈಗಾರಿಕೆಗೆ ಸಂಬಂಧಿಸಿದ್ದು.