ಸಾರಾಂಶ
ಶ್ಯೋಪುರ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ, ಮುಖಿ ಎಂಬ ಚೀತಾ 5 ಮರಿಗಳಿಗೆ ಜನ್ಮ ನೀಡಿದೆ. ವಿಶೇಷವೆಂದರೆ ಇದು ಭಾರತದಲ್ಲೇ ಜನಿಸಿದ ಚೀತಾವೊಂದು, ಮರಿಗಳನ್ನು ಹೆತ್ತ ಮೊದಲ ಘಟನೆ. ಹೀಗಾಗಿ ಇದು ಚೀತಾ ಮರುಪರಿಚಯ ಉಪಕ್ರಮದಲ್ಲಿ ಐತಿಹಾಸಿಕ ಮೈಲುಗಲ್ಲು ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ತಿಳಿಸಿದ್ದಾರೆ.
ಭಾರತದಲ್ಲಿ ಜನಿಸಿದ ‘ಮುಖಿ’ 5 ಮರಿಗಳಿಗೆ ಜನ್ಮ ನೀಡಿದೆ
ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಅವರು, ‘ಭಾರತದಲ್ಲಿ ಜನಿಸಿದ ‘ಮುಖಿ’ 5 ಮರಿಗಳಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿ ಆರೋಗ್ಯವಾಗಿವೆ. ಮುಖಿಯು 33 ತಿಂಗಳು ವಯಸ್ಸಿನ, ಭಾರತದಲ್ಲೇ ಜನಿಸಿದ ಮೊದಲ ಹೆಣ್ಣು ಚೀತಾ. ಭಾರತದಲ್ಲಿ ಜನಿಸಿದ ಚೀತಾವೊಂದು ಯಶಸ್ವಿಯಾಗಿ ಸಂತಾನೋತ್ಪತ್ತಿ ಮಾಡಿರುವುದು, ಭಾರತೀಯ ಆವಾಸಸ್ಥಾನಗಳಲ್ಲಿ ಅವುಗಳ ಹೊಂದಾಣಿಕೆ ಮತ್ತು ಆರೋಗ್ಯವನ್ನು ಸೂಚಿಸುತ್ತದೆ. ಇದು ತಳೀಯವಾಗಿ ವೈವಿಧ್ಯಮಯ ಚಿರತೆಗಳ ಸಂಖ್ಯೆಯನ್ನು ಹೆಚ್ಚಿಸುವ ನಮ್ಮ ಆಶಾವಾದಕ್ಕೆ ಮತ್ತಷ್ಟು ಬಲ ತುಂಬಿದೆ’ ಎಂದು ತಿಳಿಸಿದ್ದಾರೆ.
ಚೀತಾಗಳ ಸಂತತಿ ನಶಿಸಿ ಹಲವು ದಶಕ
ಭಾರತದಲ್ಲಿ ಚೀತಾಗಳ ಸಂತತಿ ನಶಿಸಿ ಹಲವು ದಶಕಗಳ ನಂತರ, 2022ರ ಸೆ.17ರಂದು ನಮೀಬಿಯಾದಿಂದ 8 ಚಿರತೆಗಳನ್ನು ತಂದು ಕುನೋ ಉದ್ಯಾನದಲ್ಲಿ ಬಿಡಲಾಗಿತ್ತು.
;Resize=(128,128))
;Resize=(128,128))
;Resize=(128,128))
;Resize=(128,128))