ಗುರುವಾರ ಕೇರಳ ವಿಧಾನಸಭೆಯಲ್ಲಿ ಹೊಸದಾಗಿ ಆಯ್ಕೆಗೊಂಡಿರುವ ಶಾಸಕರ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. ಈ ವೇಳೆ ಗಡಿ ಜಿಲ್ಲೆ ಕಾಸರಗೋಡಿನ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್‌ ಅವರು ಕನ್ನಡದಲ್ಲಿ ಶಪಥ ಸ್ವೀಕರಿಸಿ ಗಮನ ಸೆಳೆದರು.

ತಿರುವನಂತಪುರಂ: ಗುರುವಾರ ಕೇರಳ ವಿಧಾನಸಭೆಯಲ್ಲಿ ಹೊಸದಾಗಿ ಆಯ್ಕೆಗೊಂಡಿರುವ ಶಾಸಕರ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. ಈ ವೇಳೆ ಗಡಿ ಜಿಲ್ಲೆ ಕಾಸರಗೋಡಿನ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್‌ ಅವರು ಕನ್ನಡದಲ್ಲಿ ಶಪಥ ಸ್ವೀಕರಿಸಿ ಗಮನ ಸೆಳೆದರು.

ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್) ಶಾಸಕ ಅಶ್ರಫ್‌ ಅವರು ಮಲಯಾಳಂ ಮತ್ತು ಕನ್ನಡ ಎರಡರಲ್ಲಿಯೂ ಪ್ರಮಾಣವಚನ ಸ್ವೀಕರಿಸಿದರು. ಅವರು 2021ರಲ್ಲಿಯೂ ಶಾಸಕರಾಗಿ ಅಧಿಕಾರ ಸ್ವೀಕರಿಸುವಾಗಲೂ ಕನ್ನಡದಲ್ಲಿಯೇ ಶಪಥಗೈದಿದ್ದರು. ಇನ್ನು ದೇವಿಕುಲಂ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಫ್ ರಾಜಾ ತಮಿಳಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮಕ್ಕೆ ಕೆಲವು ಶಾಸಕರುನಡೆದು ಬಂದರೆ ಇನ್ನು ಕೆಲವರು ಸೈಕಲ್‌ಗಳಲ್ಲಿ ಅಗಮಿಸಿದ್ದು ವಿಶೇಷವಾಗಿತ್ತು.