ಸಾರಾಂಶ
ಭಾರತ ನಡೆಸಿದ ಆಪರೇಷನ್ ಸಿಂದೂರದಲ್ಲಿ ತನ್ನ 10 ಸಂಬಂಧಿಕರು ಮತ್ತು 4 ಆಪ್ತರನ್ನು ಕಳೆದುಕೊಂಡ ಜೈಷ್-ಎ-ಮೊಹಮ್ಮದ್ ಉಗ್ರಸಂಘಟನೆಯ ಸ್ಥಾಪಕ ಮಸೂದ್ ಅಜರ್‌ನ ಸಹೋದರ ಅಬ್ದುಲ್ ರೌಫ್ ಅಜರ್ ಕೂಡ ಈ ದಾಳಿಯಲ್ಲಿ ಹತನಾಗಿದ್ದಾನೆ ಎಂದು ವರದಿ
ಬಹಾವಲ್ಪುರ/ ನವದೆಹಲಿ: ಭಾರತ ನಡೆಸಿದ ಆಪರೇಷನ್ ಸಿಂದೂರದಲ್ಲಿ ತನ್ನ 10 ಸಂಬಂಧಿಕರು ಮತ್ತು 4 ಆಪ್ತರನ್ನು ಕಳೆದುಕೊಂಡ ಜೈಷ್-ಎ-ಮೊಹಮ್ಮದ್ ಉಗ್ರಸಂಘಟನೆಯ ಸ್ಥಾಪಕ ಮಸೂದ್ ಅಜರ್‌ನ ಸಹೋದರ ಅಬ್ದುಲ್ ರೌಫ್ ಅಜರ್ ಕೂಡ ಈ ದಾಳಿಯಲ್ಲಿ ಹತನಾಗಿದ್ದಾನೆ ಎಂದು ವರದಿಯಾಗಿದೆ. ಬಿಜೆಪಿ ಕೂಡ ಈತ ಹತ್ಯೆ ಆಗಿದ್ದಾನೆ ಎಂದು ಟ್ವೀಟ್ ಮಾಡಿದೆ.
ಇನ್ನೊಂದು ವರದಿ ಪ್ರಕಾರ, ಆತ ತೀವ್ರವಾಗಿ ಗಾಯಗೊಂಡಿದ್ದು, ಪಾಕಿಸ್ತಾನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದೂ ಹೇಳಲಾಗಿದೆ. ಒಟ್ಟಿನಲ್ಲಿ ರೌಫ್ ಅಜರ್ ಸ್ಥಿತಿಯ ಬಗ್ಗೆ ಗೊಂದಲಕಾರಿ ವರದಿಗಳು ಹೊರಬರುತ್ತಿದ್ದು, ಸ್ವತಂತ್ರವಾಗಿ ಯಾರೂ ದೃಢೀಕರಿಸಿಲ್ಲ.
ಜೈಷ್ ಸಂಘಟನೆಯ ಮುಖ್ಯ ಕಚೇರಿಯಿದ್ದ ಬಹಾವಲ್ಪುರದ ಜಾಮಿಯಾ ಮಸೀದಿಯ ಮೇಲೆಯೂ ಭಾರತ ಕ್ಷಿಪಣಿಗಳ ಮಳೆಗೆರೆದಿದ್ದು, ಇದರಲ್ಲಿ ಮಸೂದ್ ಅಜರ್‌ನ ಪರಿವಾರದವರು ಮತ್ತು ಆಪ್ತರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಯಾರೀತ?:
ಜೈಷ್ ಉಗ್ರಸಂಘಟನೆಯ ಸ್ಥಾಪಕ ಮಸೂದ್ ಅಜರ್‌ನ ಸಹೋದರನಾಗಿರುವ ರೌಫ್, ಅದರ 2ನೇ ಕಮಾಂಡರ್ ಆಗಿದ್ದಾನೆ. 1999ರಲ್ಲಿ ಮಸೂದ್ ಬಿಡುಗಡೆಗೆ ಆಗ್ರಹಿಸಿ ನಡೆದ ಕಂದಹಾರ್ ವಿಮಾನ ಅಪಹರಣದ ಹಿಂದೆ ಇದ್ದ ಈತ, 2001ರ ಸಂಸತ್ ದಾಳಿ, 2003ರಲ್ಲಿ ನಡೆದ ನಗರೋಟಾ ಸೇನಾ ಕ್ಯಾಂಪ್ ಮೇಲಿನ ದಾಳಿ, 2019ರ ಪುಲ್ವಾಮಾ ದಾಳಿಗಳಲ್ಲೂ ಮಹತ್ವದ ಪಾತ್ರ ವಹಿಸಿದ್ದ. ರೌಫ್ ಅಜರ್, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಾಂಟೆಡ್ ಪಟ್ಟಿಯಲ್ಲಿಯೂ ಇದ್ದಾನೆ.
ಮೋಸ್ಟ್ ವಾಂಟೆಡ್ ಉಗ್ರ
ರೌಫ್ ಅಜರ್, ಜೈಷ್ ಎ ಮೊಹಮ್ಮದ್ ಸ್ಥಾಪಕ ಅಜರ್ ಮಸೂದ್‌ನ ಸೋದರ
ಕಂದಹಾರ್ ಪ್ರಕರಣ, ಸಂಸತ್ ದಾಳಿ, ಪುಲ್ವಾಮಾ ದಾಳಿಯಲ್ಲಿ ಈತನ ಕೈವಾಡ
ಭಾರತದ ಮೋಸ್ಟ್ ವಾಂಟೆಡ್ ಉಗ್ರಗಾಮಿಗಳ ಪಟ್ಟಿಯಲ್ಲಿ ಈತನ ಹೆಸರೂ ಇದೆ
ಭಾರತ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ರೌಫ್ ಸಾವು, ಗಾಯಗೊಂಡ ವರದಿ