‘ದ್ವೇಷ’ ಮರೆತು ಕೈಕುಲುಕಿ ಮನದುಂಬಿ ನಕ್ಕ ಪ್ರಧಾನಿ ನರೇಂದ್ರ ಮೋದಿ, ಮಲ್ಲಿಕಾರ್ಜುನ ಖರ್ಗೆ

| Published : Dec 07 2024, 12:31 AM IST / Updated: Dec 07 2024, 06:47 AM IST

ಸಾರಾಂಶ

ಇತ್ತೀಚೆಗೆ ವೈಯಕ್ತಿಕವಾಗಿ ಪರಸ್ಪರ ಅತ್ಯಂತ ಹರಿತ ವಾಗ್ದಾಳಿ ನಡೆಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನದಲ್ಲಿ ಮುಖಾಮುಖಿಯಾದರು.

ನವದೆಹಲಿ: ಇತ್ತೀಚೆಗೆ ವೈಯಕ್ತಿಕವಾಗಿ ಪರಸ್ಪರ ಅತ್ಯಂತ ಹರಿತ ವಾಗ್ದಾಳಿ ನಡೆಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನದಲ್ಲಿ ಮುಖಾಮುಖಿಯಾದರು. 

ಈ ವೇಳೆ ಅವರು ದ್ವೇಷ ಮರೆತು ಕೈಕುಲುಕಿದರು ಹಾಗೂ ಹಾಸ್ಯ ಚಟಾಕಿಗಳನ್ನು ಹಾರಿಸುತ್ತ ಮನದುಂಬಿ ನಕ್ಕರು.