ಇತ್ತೀಚೆಗೆ ಭಕ್ತನೊಬ್ಬನ ನಿಗೂಢ ಸಾವಿನಿಂದ ಸುದ್ದಿಯಲ್ಲಿರುವ, ವೃಂದಾವನದಲ್ಲಿರುವ ಪ್ರಸಿದ್ಧ ಆಧ್ಯಾತ್ಮಿಕ ಗುರುಗಳಾದ ಪ್ರೇಮಾನಂದ ಮಹಾರಾಜರ ಆಶ್ರಮಕ್ಕೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಭೇಟಿ ನೀಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.
ವೃಂದಾವನ(ಉ.ಪ್ರ.): ಇತ್ತೀಚೆಗೆ ಭಕ್ತನೊಬ್ಬನ ನಿಗೂಢ ಸಾವಿನಿಂದ ಸುದ್ದಿಯಲ್ಲಿರುವ, ವೃಂದಾವನದಲ್ಲಿರುವ ಪ್ರಸಿದ್ಧ ಆಧ್ಯಾತ್ಮಿಕ ಗುರುಗಳಾದ ಪ್ರೇಮಾನಂದ ಮಹಾರಾಜರ ಆಶ್ರಮಕ್ಕೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಭೇಟಿ ನೀಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.
ಜನಪ್ರಿಯತೆಯನ್ನು ಹೆಚ್ಚಿಸಲು ₹5 ಕೋಟಿ
‘ಪ್ರೇಮಾನಂದ ಮಹಾರಾಜರ ಆಶ್ರಮದ ಜನಪ್ರಿಯತೆಯನ್ನು ಹೆಚ್ಚಿಸಲು ರಾಜಸ್ಥಾನ ಮೂಲದ ರಿಯಲ್ ಎಸ್ಟೇಟ್ ಕಂಪನಿಯೊಂದು ವಿರಾಟ್ ಕೊಹ್ಲಿ ಅವರಿಗೆ ₹5 ಕೋಟಿ ನೀಡಿದೆ. ಅದಕ್ಕೇ ಅವರು ಆಶ್ರಮಕ್ಕೆ ಭೇಟಿ ನೀಡುತ್ತಾರೆ’ ಎಂದು ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್ ಎಂಬ ಸಂಘಟನೆಯ ಅಧ್ಯಕ್ಷರಾದ ದಿನೇಶ್ ಶರ್ಮಾ (ಫಲಹಾರಿ ಮಹಾರಾಜ್), ಪತ್ರವೊಂದರಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಆರೋಪ ನಕಾರ:
ಇದರ ಬೆನಲ್ಲೇ, ವಿರಾಟ್ ಕೊಹ್ಲಿ ಅವರ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿದ್ದು, ‘ಕೊಹ್ಲಿ ಅವರು ಕೇವಲ ತಮ್ಮ ವೈಯಕ್ತಿಕ ಆಳವಾದ ನಂಬಿಕೆ ಮತ್ತು ಮಹಾರಾಜರ ಮೇಲಿನ ಗೌರವದಿಂದಾಗಿ ವೃಂದಾವನದ ಆಶ್ರಮಕ್ಕೆ ಭೇಟಿ ನೀಡುತ್ತಾರೆಯೇ ಹೊರತು ಯಾವುದೇ ವಾಣಿಜ್ಯ ಉದ್ದೇಶಕ್ಕಲ್ಲ. ಅವರ ಆರೋಪ ಸುಳ್ಳು, ಆಧಾರರಹಿತ’ ಎಂದಿದ್ದಾರೆ.

