ಸಾರಾಂಶ
ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯೊಬ್ಬರಿಗೆ ಗುಂಡುಹೊಡೆದು ಸಾಯಿಸುವ ಶಿಕ್ಷೆಗೆ ಜಾರಿಗೆ ಅಮೆರಿಕದಲ್ಲಿ ಸಿದ್ಧತೆ ನಡೆಸಲಾಗಿದೆ. 15 ವರ್ಷಗಳ ಬಳಿಕ ಅಮೆರಿಕದಲ್ಲಿ ಈ ಮಾದರಿಯಲ್ಲಿ ಶಿಕ್ಷೆ ಜಾರಿಗೊಳಿಸಲಾಗುತ್ತಿದೆ.
ಹೂಸ್ಟನ್: ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯೊಬ್ಬರಿಗೆ ಗುಂಡುಹೊಡೆದು ಸಾಯಿಸುವ ಮೂಲಕ ಶಿಕ್ಷೆಗೆ ಜಾರಿಗೆ ಅಮೆರಿಕದಲ್ಲಿ ಸಿದ್ಧತೆ ನಡೆಸಲಾಗಿದೆ. 15 ವರ್ಷಗಳ ಬಳಿಕ ಅಮೆರಿಕದಲ್ಲಿ ಈ ಮಾದರಿಯಲ್ಲಿ ಶಿಕ್ಷೆ ಜಾರಿಗೊಳಿಸಲಾಗುತ್ತಿದೆ.
2001ರಲ್ಲಿ ತನ್ನ ಮಾಜಿ ಪ್ರೇಯಸಿಯ ಪೋಷಕರನ್ನು ಬಾಸ್ಕೆಟ್ ಬಾಲ್ ಬ್ಯಾಟ್ ಬಳಸಿ ಕೊಂದಿದ್ದ ಬ್ರಾಡ್ ಸಿಗ್ಮನ್ ಎಂಬಾತನನ್ನು ಶುಕ್ರವಾರ ದಕ್ಷಿಣ ಕ್ಯಾರೋಲಿನಾದಲ್ಲಿ ಗುಂಡಿಕ್ಕಿ ಶಿಕ್ಷೆ ಜಾರಿ ಮಾಡಲಾಗುವುದು.ಅಮೆರಿಕದಲ್ಲಿ 1976ರಲ್ಲಿ ಮರಣದಂಡನೆಗೆ ಸುಪ್ರೀಂ ಕೋರ್ಟ್‌ನ ಅನುಮತಿ ದೊರೆತ ಬಳಿಕ 5 ವಿಧಗಳಲ್ಲಿ ಅಪರಾಧಿಯ ಪ್ರಾಣ ತೆಗೆಯಲಾಗುತ್ತಿದೆ. ಅವುಗಳೆಂದರೆ ಮಾರಣಾಂತಿಕ ಚುಚ್ಚುಮದ್ದು, ಮಾರಣಾಂತಿಕ ಅನಿಲ,
-ಮಾರಣಾಂತಿಕ ಚುಚ್ಚುಮದ್ದು: ವಿವಿಧ ವಿಷಕಾರಿ ದ್ರವಗಳನ್ನು ಬೆರೆಸಿ, ಅದನ್ನು ಮರಣದಂಡನೆ ಶಿಕ್ಷೆಗೆ ಒಳಗಾದ ವ್ಯಕ್ತಿಗೆ ಚುಚ್ಚಿ, ಪ್ರಾಣ ಹರಣ ಮಾಡಲಾಗುವುದು. ಇದು ಅಮೆರಿಕದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ವಿಧಾನ. ವಿದ್ಯುತ್ ಶಾಕ್, ನೇಣುಗಂಬ, ವಿಷಯ ಇಂಜೆಕ್ಷನ್ ನೀಡುವುದು.
-ಮಾರಣಾಂತಿಕ ಅನಿಲ: ಅಮೆರಿಕದ 8 ರಾಜ್ಯಗಳಲ್ಲಿ, ಅಪರಾಧಿಗಳನ್ನು ಗಾಳಿಯಾಡದ ಕೋಣೆಯೊಳಗೆ ಬಿಟ್ಟು, ವಿಷಕಾರಿ ಅನಿಲಗಳನ್ನು ಬಿಡುಗಡೆ ಮಾಡಿ ಉಸಿರುಗಟ್ಟಿಸಿ ಕೊಲ್ಲಲಾಗುತ್ತದೆ.
-ವಿದ್ಯುದಾಘಾತ: 2000ದಿಂದೀಚೆಗೆ 9 ರಾಜ್ಯಗಳು, 500 ಮತ್ತು 2,000 ವೋಲ್ಟ್ ವಿದ್ಯುತ್ ಹರಿಸಿ ಸಾಯಿಸುವ ವಿಧಾನವನ್ನು ಅಳವಡಿಸಿಕೊಂಡಿವೆ.
-ಗುಂಡಿಟ್ಟು ಕೊಲ್ಲುವುದು: ಅಪರಾಧಿಯನ್ನು ಕುರ್ಚಿಯೊಂದಕ್ಕೆ ಕಟ್ಟಿಹಾಕಿ, ಸುಮಾರು 6 ಮೀಟರ್ ಅಂತರದಿಂದ ಜೈಲು ಸಿಬ್ಬಂದಿಯ ಗುಂಪು ಅವರ ಹೃದಯಕ್ಕೆ ಗುಂಡು ಹಾರಿಸಲಾಗುತ್ತದೆ. 1977ರಿಂದ 2010ರ ವರೆಗೆ ಮೂವರನ್ನು ಹೀಗೆ ಹತ್ಯೆ ಮಾಡಲಾಗಿತ್ತು.
-ಗಲ್ಲುಶಿಕ್ಷೆ: ಇದು ಪ್ರಾಥಮಿಕ ವಿಧಾನಗಳಲ್ಲಿ ಒಂದಾಗಿದೆ. 1608-2002 ಅವಧಿಯಲ್ಲಿ ಅಮೆರಿಕದಲ್ಲಿ 9,322 ಜನರನ್ನು ಗಲ್ಲಿಗೇರಿಸಲಾಗಿದೆ.