ಸಾರಾಂಶ
ಲೆಸ್ಬಿಯನ್ ಸಂಗಾತಿಗಾಗಿ ತಾಯಿಯೊಬ್ಬಳು 5 ತಿಂಗಳ ಶಿಶುವನ್ನೇ ಕೊಲೆ ಮಾಡಿರುವ ಪೈಶಾಚಿಕ ಕೃತ್ಯ ಬೆಂಗಳೂರಿಗೆ ಗಡಿ ಹೊಂದಿರುವ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಪತಿ ನೀಡಿದ ದೂರಿನ ಮೇರೆಗೆ ಕೊಲೆ ಮಾಡಿದ ತಾಯಿ ಮತ್ತು ಆಕೆಯ ಸಲಿಂಗಿ ಸಂಗಾತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೃಷ್ಣಗಿರಿ: ಲೆಸ್ಬಿಯನ್ (ಮಹಿಳಾ ಸಲಿಂಗಿ) ಸಂಗಾತಿಗಾಗಿ ತಾಯಿಯೊಬ್ಬಳು ತನ್ನ 5 ತಿಂಗಳ ಶಿಶುವನ್ನೇ ಕೊಲೆ ಮಾಡಿರುವ ಪೈಶಾಚಿಕ ಕೃತ್ಯ ಬೆಂಗಳೂರಿಗೆ ಗಡಿ ಹೊಂದಿರುವ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಪತಿ ನೀಡಿದ ದೂರಿನ ಮೇರೆಗೆ ಕೊಲೆ ಮಾಡಿದ ತಾಯಿ ಮತ್ತು ಆಕೆಯ ಸಲಿಂಗಿ ಸಂಗಾತಿಯನ್ನು ಪೊಲೀಸರು ಬಂಧಿಸಿದ್ದಾರೆ.
5 ತಿಂಗಳ ಹಿಂದಷ್ಟೇ ಮಗು ಹೆತ್ತಿದ್ದ ಭಾರತಿ
5 ತಿಂಗಳ ಹಿಂದಷ್ಟೇ ಮಗು ಹೆತ್ತಿದ್ದ ಭಾರತಿಗೆ, ಕೆಲ ತಿಂಗಳ ಹಿಂದೆ ಸುಮಿತ್ರಾ ಎಂಬಾಕೆಯ ಸ್ನೇಹ ಬೆಳೆದಿತ್ತು. ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿ ದೈಹಿಕ ಸಂಬಂಧ ಹೊಂದಿದ್ದರು. ಈ ನಡುವೆ ತಮ್ಮಿಬ್ಬರ ಸಂಬಂಧಕ್ಕೆ ತನ್ನ 5 ತಿಂಗಳ ಮಗು ಅಡ್ಡಿಯಾಗಿದೆ ಎಂದು ಬೇಸತ್ತ ಭಾರತಿ, ಇತ್ತೀಚೆಗೆ ಹಾಲುಣಿಸುವಾಗಲೇ ತನ್ನ ಮಗುವಿನ ಕತ್ತುಹಿಸುಕಿದ್ದಾಳೆ. ಬಳಿಕ ಮಗು ನಿತ್ರಾಣಗೊಂಡ ಬಳಿಕ ಕೃಷ್ಣಗಿರಿ ಜಿಲ್ಲೆಯ ಹೊಸೂರು ಗಡಿ ಸಮೀಪ ಕೆಲಮಂಗಳಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಅಲ್ಲಿ ಮಗು ಮೃತಪಟ್ಟಿರುವುದಾಗಿ ವೈದ್ಯರು ಖಾತ್ರಿಪಡಿಸಿದ ಬಳಿಕ ಮಗುವನ್ನು ಹೂತಿದ್ದಾಳೆ.
ಗೊತ್ತಾಗಿದ್ದು ಹೇಗೆ?
ಶಿಶುವಿನ ಸಾವಿನ ಬಳಿಕ ತಂದೆ ಸುರೇಶ್ (38), ತನ್ನ ಪತ್ನಿ ಭಾರತಿ ಫೋನ್ ಹುಡುಕಿ ಅದರಲ್ಲಿ ಸುಮಿತ್ರಾ ಜೊತೆಗೆ ಆಕೆಯ ಖಾಸಗಿ ಫೋಟೋ-ವಿಡಿಯೋಗಳು, ಸಂಭಾಷಣೆಗಳು, ಧ್ವನಿಮುದ್ರಿಕೆಗಳನ್ನು ಸಂಗ್ರಹಿಸಿ, ಶಿಶುವನ್ನು ಇವರೇ ಕೊಂದಿದ್ದಾರೆ ಎಂದು ದೂರಿತ್ತಿದ್ದಾರೆ. ಘಟನೆ ಸಂಬಂಧ ಅಧಿಕಾರಿಗಳು ಭಾರತಿ ಮತ್ತು ಸುಮಿತ್ರಾಳನ್ನು ಬಂಧಿಸಿದ್ದಾರೆ. ಹೂತಿದ್ದ ಶಿಶುವಿನ ಶವವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಕೊಲೆಯಾಗಿರುವುದು ಖಾತ್ರಿಯಾಗಿದೆ ಎಂದು ಅಧಿಕಾರಿಗು ತಿಳಿಸಿದ್ದಾರೆ.
;Resize=(128,128))