ಅಮೆರಿಕದ ಜಾರ್ಜಿಯಾ ಬಳಿಕ ಸ್ಕಾಟ್ಲೆಂಡ್‌ನಲ್ಲೂ ಹಿಂದೂ ಫೋಬಿಯಾ ವಿರುದ್ಧ ಬಿಲ್‌ ಮಂಡನೆ

| N/A | Published : Apr 19 2025, 12:52 AM IST / Updated: Apr 19 2025, 05:52 AM IST

ಸಾರಾಂಶ

ಅಮೆರಿಕದ ರಾಜ್ಯವಾದ ಜಾರ್ಜಿಯಾ ಹಿಂದೂ ಫೋಬಿಯಾ ವಿರುದ್ಧ ಮಸೂದೆಯನ್ನು ಪರಿಚಯಿಸಿದ ಬೆನ್ನಲ್ಲೇ, ಸ್ಕಾಟ್ಲೆಂಡ್ ಸಂಸತ್ತಿನಲ್ಲೂ ಹಿಂದೂ ವಿರೋಧಿ ಪೂರ್ವಾಗ್ರಹದ ವಿರುದ್ಧ ನಿರ್ಣಯ ಮಂಡನೆ ಮಾಡಲಾಗಿದೆ.

 ಲಂಡನ್‌: ಅಮೆರಿಕದ ರಾಜ್ಯವಾದ ಜಾರ್ಜಿಯಾ ಹಿಂದೂ ಫೋಬಿಯಾ ವಿರುದ್ಧ ಮಸೂದೆಯನ್ನು ಪರಿಚಯಿಸಿದ ಬೆನ್ನಲ್ಲೇ, ಸ್ಕಾಟ್ಲೆಂಡ್ ಸಂಸತ್ತಿನಲ್ಲೂ ಹಿಂದೂ ವಿರೋಧಿ ಪೂರ್ವಾಗ್ರಹದ ವಿರುದ್ಧ ನಿರ್ಣಯ ಮಂಡನೆ ಮಾಡಲಾಗಿದೆ.

ಸ್ಕಾಟ್ಲೆಂಡ್‌ನಲ್ಲಿ ಹೆಚ್ಚುತ್ತಿರುವ ಹಿಂದೂಗಳ ಬಗೆಗಿನ ಪೂರ್ವಾಗ್ರಹ, ತಾರತಮ್ಯ ಮತ್ತು ಕಡೆಗಣಿಸುವಿಕೆ ಮಟ್ಟಗಳ ಬಗ್ಗೆ ಗ್ಲಾಸ್ಗೋ ಮೂಲದ ಗಾಂಧಿಯನ್‌ ಸೊಸೈಟಿ ತಯಾರಿಸಿರುವ ‘ಸ್ಕಾಟ್ಲೆಂಡ್‌ನಲ್ಲಿ ಹಿಂದೂಫೋಬಿಯಾ’ ವರದಿಯ ಆಧಾರದಲ್ಲಿ, ಅಲ್ಬಾ ಪಕ್ಷದ ಸಂಸದ ಆಶ್‌ ರೇಗನ್‌ ಈ ನಿರ್ಣಯ ಮಂಡಿಸಿದ್ದಾರೆ.

ವರದಿಯಲ್ಲೇನಿದೆ?:

ಸ್ಕಾಟ್ಲೆಂಡ್‌ನಲ್ಲಿ ಹಿಂದೂಫೋಬಿಯಾ ವರದಿಯನ್ನು ಧೃವ್‌ ಕುಮಾರ್‌, ನೀಲ್‌ ಲಾಲ್‌, ಸುಖಿ ಬೇನ್ಸ್‌, ಅನುರಂಜನ್‌ ಝಾ, ಅಜಿತ್‌ ತ್ರಿವೇದಿ ಅಧ್ಯಯನ ನಡೆಸಿ ತಯಾರಿಸಿರುವ ವರದಿಯಲ್ಲಿ ಸ್ಕಾಟ್ಲೆಂಡ್‌ನಲ್ಲಿ ಹೆಚ್ಚುತ್ತಿರುವ ಹಿಂದೂಫೋಬಿಯಾ, ಅದರ ವಿರುದ್ಧ ಜಾಗೃತಿ ಮೂಡಿಸುವುದು, ವೈವಿಧ್ಯಮಯ ಸಮುದಾಯಗಳಲ್ಲಿ ಅಂತರಧರ್ಮೀಯ ಸಂವಾದ, ಸಾಮಾಜಿಕ ಒಗ್ಗಟ್ಟು ಮತ್ತು ಪರಸ್ಪರ ಗೌರವದ ಮಹತ್ವವನ್ನು ತಿಳಿಸಲಾಗಿದೆ. ದ್ವೇಷ ಅಪರಾಧಗಳು, ತಾರತಮ್ಯ, ಸಾಂಸ್ಕೃತಿಕ ಅಸಂವೇದನಾಶೀಲತೆ ಮತ್ತು ತಪ್ಪು ಮಾಧ್ಯಮ ನಿರೂಪಣೆಗಳಂತಹ ಘಟನೆಗಳನ್ನು ಇದರಲ್ಲಿ ಉದಾಹರಿಸಲಾಗಿದೆ.