ಬಿಷ್ಣೋಯಿ ಬಳಸಿ ನಿಜ್ಜರ್ ಹತ್ಯೆ : ಗ್ಯಾಂಗ್‌ಸ್ಟರ್‌ಗೆ ಭಾರತ ಸರ್ಕಾರದ ನಂಟು - ಕೆನಡಾ ಆರೋಪ

| Published : Oct 15 2024, 08:21 AM IST

Nijjar  3.jpg

ಸಾರಾಂಶ

  ಉಗ್ರ ನಿಜ್ಜರ್ ಹತ್ಯೆ ಪ್ರಕರಣ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಸಮರಕ್ಕೆ ಕಾರಣವಾಗಿರುವಾಗಲೇ, ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ ಬಳಸಿ ನಿಜ್ಜರ್‌ನನ್ನು ಭಾರತ ಸರ್ಕಾರ ಹತ್ಯೆ ಮಾಡಿಸಿದೆ ಎಂದು ಕೆನಡಾ ಪೊಲೀಸರು ಆರೋಪ ಮಾಡಿದ್ದಾರೆ.

ಒಟ್ಟಾವ: ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ಪ್ರಕರಣ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಸಮರಕ್ಕೆ ಕಾರಣವಾಗಿರುವಾಗಲೇ, ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ ಬಳಸಿ ನಿಜ್ಜರ್‌ನನ್ನು ಭಾರತ ಸರ್ಕಾರ ಹತ್ಯೆ ಮಾಡಿಸಿದೆ ಎಂದು ಕೆನಡಾ ಪೊಲೀಸರು ಆರೋಪ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರ್‌ಸಿಎಂಪಿ (ರಾಯಲ್‌ ಕೆನಡಾ ಮೌಂಟೆಡ್‌ ಪೊಲೀಸ್‌)ಯ ಹಿರಿಯ ಅಧಿಕಾರಿ ಬ್ರಿಗೆಟ್ಟಿ, ಭಾರತ ಸರ್ಕಾರ, ಕೆನಡಾ ದೇಶದಲ್ಲಿನ ದಕ್ಷಿಣ ಏಷ್ಯರನ್ನು ಅದರಲ್ಲೂ ವಿಶೇಷವಾಗಿ ಖಲಿಸ್ತಾನಿ ಬೆಂಬಲಿಗರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. 

ದಾಳಿಕೋರರು ಸಂಘಟಿತ ಅಪರಾಧಿಕ ಶಕ್ತಿಗಳು. ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಜೊತೆಗೆ ಭಾರತದ ಏಜೆಂಟ್‌ಗಳ ನಂಟಿದೆ ಎಂಬುದು ನಮ್ಮ ನಂಬಿಕೆ ಎಂದು ಹೇಳಿದ್ದಾರೆ.