ಕೆನಡಾದಲ್ಲಿ ದೇಗುಲ ಗೋಡೆ ಮೇಲೆ ಖಲಿಸ್ತಾನಿ ಪರ ಬರಹ : ಪುಂಡರ ಅಟ್ಟಹಾಸ
Apr 22 2025, 01:48 AM ISTಕೆನಡಾದಲ್ಲಿ ಖಲಿಸ್ತಾನಿ ಪರ ಪುಂಡರ ಅಟ್ಟಹಾಸ ದಿನ ಕಳೆದಂತೆ ಹೆಚ್ಚಾಗುತ್ತಲೇ ಸಾಗಿದೆ. 2 ದಿನ ಹಿಂದೆ ಗುರುದ್ವಾರದ ಮೇಲೆ ಭಾರತ ವಿರೋಧಿ ಬರಹ ಕೀಚಿದ್ದ ಖಲಿಸ್ತಾನಿಗಳು, ಬಳಿಕ ಸರ್ರೆ ಎಂಬಲ್ಲಿನ ಶ್ರೀ ಲಕ್ಷ್ಮೀ ನಾರಾಯಣ ಮಂದಿರದ ಮೇಲೆ ಖಲಿಸ್ತಾನಿ ಪರ ಬರಹಗಳನ್ನು ಗೀಚಿ ವಿರೂಪ ಮಾಡಿದ್ದಾರೆ.