ಸಾರಾಂಶ
ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್ ಅವರ ದಿಢೀರ್ ರಾಜೀನಾಮೆ ಬೆನ್ನಲ್ಲೇ, ಮುಂದೆ ಆ ಹುದ್ದೆಯನ್ನು ಯಾರು ಅಲಂಕರಿಸಬಹುದು ಎಂಬ ಚರ್ಚೆಗಳು ಆರಂಭವಾಗಿದೆ.
ನವದೆಹಲಿ: ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್ ಅವರ ದಿಢೀರ್ ರಾಜೀನಾಮೆ ಬೆನ್ನಲ್ಲೇ, ಮುಂದೆ ಆ ಹುದ್ದೆಯನ್ನು ಯಾರು ಅಲಂಕರಿಸಬಹುದು ಎಂಬ ಚರ್ಚೆಗಳು ಆರಂಭವಾಗಿದೆ. ವರ್ಷಾಂತ್ಯದಲ್ಲಿ ಚುನಾವಣೆ ಎದುರಿಸಲಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಥವಾ ಬಿಹಾರದವರೇ ಆಗಿರುವ ಬಿಹಾರ ಮೂಲದ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ರಾಯ್ ಅವರನ್ನು ನೇಮಿಸುವ ಸಾಧ್ಯತೆ ಬಗ್ಗೆ ಊಹಾಪೋಹ ಕೇಳಿಬಂದಿದೆ.
ಇದರ ಹೊರತಾಗಿ ಭಾರತರತ್ನ ಕರ್ಪೂರಿ ಠಾಕುರ್ ಪುತ್ರ ರಾಜ್ಯಸಚಿವ ರಾಮನಾಥ್ ಠಾಕುರ್, ಬಿಹಾರದ ರಾಜ್ಯಪಾಲ ಮೊಹಮ್ಮದ್ ಆರಿಫ್ ಖಾನ್, ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಹೆಸರೂ ಕೇಳಿಬರುತ್ತಿವೆ.
ಇದಲ್ಲದೆ ಕಾಂಗ್ರೆಸ್‌ನಿಂದ ದಿನೇ ದಿನೇ ದೂರವಾಗುತ್ತಿರುವ ಶಶಿ ತರೂರ್ ಹೆಸರು ಕೂಡಾ ಕೇಳಿಬಂದಿದೆ. ಇದಲ್ಲದೆ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಹೆಸರು ಕೂಡಾ ಕೇಳಿಬಂದಿದೆ.