ಹುತಾತ್ಮ ಸಮಾಧಿ ಪ್ರವೇಶಕ್ಕೆ ಗೇಟ್‌ ಹಾರಿದ ಜಮ್ಮು-ಕಾಶ್ಮೀರ ಸಿಎಂ ಒಮರ್!

| N/A | Published : Jul 15 2025, 01:00 AM IST / Updated: Jul 15 2025, 05:22 AM IST

ಹುತಾತ್ಮ ಸಮಾಧಿ ಪ್ರವೇಶಕ್ಕೆ ಗೇಟ್‌ ಹಾರಿದ ಜಮ್ಮು-ಕಾಶ್ಮೀರ ಸಿಎಂ ಒಮರ್!
Share this Article
  • FB
  • TW
  • Linkdin
  • Email

ಸಾರಾಂಶ

ಜಮ್ಮು ಕಾಶ್ಮೀರ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಳ್ಳುವುದಕ್ಕೆ ಅನುಮತಿ ಸಿಗದ್ದಕ್ಕೆ ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಮತ್ತು ಸಚಿವ ಸಂಪುಟದ ಸದಸ್ಯರು, ಹುತಾತ್ಮರ ಸಮಾಧಿ ಸ್ಥಳದ ಗೇಟ್‌ ಹಾರಿದ ಘಟನೆ ನಡೆದಿದೆ.

 ಶ್ರೀನಗರ: ಜಮ್ಮು ಕಾಶ್ಮೀರ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಳ್ಳುವುದಕ್ಕೆ ಅನುಮತಿ ಸಿಗದ್ದಕ್ಕೆ ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಮತ್ತು ಸಚಿವ ಸಂಪುಟದ ಸದಸ್ಯರು, ಹುತಾತ್ಮರ ಸಮಾಧಿ ಸ್ಥಳದ ಗೇಟ್‌ ಹಾರಿದ ಘಟನೆ ನಡೆದಿದೆ. 

ಜು.13ರಂದು ಪ್ರತಿ ವರ್ಷ ಕಾಶ್ಮೀರದಲ್ಲಿ ಹುತಾತ್ಮರ ದಿನ ಎಂದು ಆಚರಿಸಿತ್ತಾರೆ. 1931ರ ಜುಲೈ 13ರಂದು ಮಹಾರಾಜ ಹರಿ ಸಿಂಗ್ ಅವರ ಡೋಗ್ರಾ ಪಡೆಗಳು ಅಂದು 22 ಕಾಶ್ಮೀರಿ ಪ್ರತಿಭಟನಾಕಾರರನ್ನು ಕೊಂದಿದ್ದವು. ಇದರ ಸ್ಮರಣಾರ್ಥ ಆಚರಣೆ ನಡೆಯುತ್ತದೆ. ಲೆಫ್ಟಿನೆಂಟ್‌ ಗವರ್ನರ್‌ ನೇತೃತ್ವದ ಆಡಳಿತವು 2020ರ ರಜಾದಿನಗಳ ಪಟ್ಟಿಯಿಂದ ಈ ದಿನ ಕೈ ಬಿಟ್ಟಿತ್ತು. ಅಲ್ಲದೇ ಲೆ। ಗವರ್ನರ್‌ ಮನೋಜ್ ಸಿನ್ಹಾ ಹುತಾತ್ಮ ದಿನ ಆಚರಿಸದಂತೆ ನಿರ್ಬಂಧ ವಿಧಿಸಿದ್ದರು. ಆಡಳಿತರೂಢ ನ್ಯಾಷನಲ್ ಕಾನ್ಫೆರೆನ್ಸ್‌ನ ಪ್ರಮುಖ ನಾಯಕರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು.

ಅದಾದ 1 ದಿನದ ಬಳಿಕ ಸಿಎಂ ಒಮರ್‌, ನೌಹಟ್ಟಾದಲ್ಲಿರುವ ಹುತಾತ್ಮರ ಸಮಾಧಿ ಸ್ಥಳಕ್ಕೆ ಪುಷ್ಪ ನಮನ ಸಲ್ಲಿಸಲು ಬಂದಿದ್ದಾರೆ. ಪೊಲೀಸರು ಅನುಮತಿ ನೀಡದೆ ತಡೆಯಲು ಪ್ರಯತ್ನಿಸಿದ್ದಕ್ಕೆ ಗೇಟ್‌ ಹಾರಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದ್ದಾರೆ. ಅಲ್ಲದೆ, ಅವರು ಗವರ್ನರ್‌ ವಿಧಿಸಿದ ಕಟ್ಟಳೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read more Articles on