ಡೂಮ್ಸ್ ಡೇ ವಿಮಾನ ಪ್ರತ್ಯಕ್ಷ : ಅಮೆರಿಕ ರಣರಂಗಕ್ಕೆ? ಇಸ್ರೇಲ್ ಇರಾನ್ ಸಂಘರ್ಷ ಕೈಮೀರಿ ಹೋಗುತ್ತಿರುವ ಹೊತ್ತಿನಲ್ಲಿ, ಅಮೆರಿಕ ಕೂಡ ರಣರಂಗ ಪ್ರವೇಶ ಸಾಧ್ಯತೆ ದಟ್ಟವಾಗಿಸುವ ಬೆಳವಣಿಗೆಯೊಂದು ನಡೆದಿದೆ. ಅಣ್ವಸ್ತ್ರ ದಾಳಿ ಸಹಿಸಬಲ್ಲ ಅಮೆರಿಕದ ‘ಡೂಮ್ಸ್ಡೇ ವಿಮಾನ’ ಇದ್ದಕ್ಕಿದ್ದಂತೆ ಕಾರ್ಯಪ್ರವೃತ್ತವಾಗಿದ್ದು, ವಾಷಿಂಗ್ಟನ್ಗೆ ಬಂದಿಳಿದಿದೆ.