ಅಣ್ಣಾ ಡಿಎಂಕೆಗೆ ಮರಳಿ ಬರುವೆ : ತಮಿಳುನಾಡು ಮಾಜಿ ಸಿಎಂ ಪನ್ನೀರಸೆಲ್ವಂ ಷರತ್ತಿನ ಆಫರ್ಅಣ್ಣಾ ಡಿಎಂಕೆಯಿಂದ ಉಚ್ಚಾಟನೆಗೊಂಡಿದ್ದ ತಮಿಳುನಾಡು ಮಾಜಿ ಸಿಎಂ ಒ. ಪನ್ನೀರಸೆಲ್ವಂ, ಪಕ್ಷಕ್ಕೆ ಮರಳುವ ಇರಾದೆ ವ್ಯಕ್ತಪಡಿಸಿದ್ದಾರೆ. ತಾವಲ್ಲದೆ ಪಕ್ಷದ ದಿವಂಗತ ನಾಯಕಿ ಜಯಲಲಿತಾರ ಆಪ್ತ ಗೆಳತಿ ವಿ.ಕೆ. ಶಶಿಕಲಾ ಹಾಗೂ ಮುಖಂಡ ಟಿಟಿವಿ ದಿನಕರನ್ ಕೂಡ ಪಕ್ಷಕ್ಕೆ ಮರಳಲು ಉತ್ಸುಕರಾಗಿದ್ದಾರೆ ಎಂದಿದ್ದಾರೆ.