ಕೋಲ್ಕತಾ: ಫಾಲ್ಟಾದ ಪುಷ್ಪಾ ಎಂದೇ ಕುಖ್ಯಾತನಾಗಿರುವ ಪಶ್ಚಿಮ ಬಂಗಾಳದ ಟಿಎಂಸಿ ನಾಯಕ ಜಹಾಂಗೀರ್‌ ಖಾನ್‌ನನ್ನು ಭೂಕಬಳಿಕೆ, ಸುಲಿಗೆ ಹಾಗೂ ಇತರ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆತನನ್ನು ಟೀಶರ್ಟ್‌ ಮತ್ತು ಚಡ್ಡಿಯಲ್ಲೇ ಫಾಲ್ಟಾ ಕ್ಷೇತ್ರದಲ್ಲಿ ಪೊಲೀಸರು ಮೆರವಣಿಗೆ ಮಾಡಿಸಿದ್ದಾರೆ.

ಬಂಧನದಿಂದ ತಪ್ಪಿಸಿಕೊಳ್ಳಲು ಭಾರತದಿಂದ ಪರಾರಿಯಾಗಲು ಯತ್ನಿಸಿದ್ದ ಖಾನ್‌ನನ್ನು ಭಾರತ-ನೇಪಾಳ ಗಡಿಯ ಪಣಿಟಾಂಕಿ ಬಳಿ ಬಂಧಿಸಲಾಗಿತ್ತು. ಚುನಾವಣೆ ವೇಳೆ ಹಿಂಸಾಚಾರ ನಡೆಸದಂತೆ ಹಿರಿಯ ಐಪಿಎಸ್‌ ಅಧಿಕಾರಿ ಎಚ್ಚರಿಕೆ ನೀಡಿದ ವೇಳೆ, ನೀವು ಸಿಂಗಂ ಆದರೆ ನಾನು ಪುಷ್ಪಾ ಎಂದು ಅಲ್ಲು ಅರ್ಜುನ್‌ ಚಿತ್ರದ ನಾಯಕನನ್ನು ಉಲ್ಲೇಖಿಸಿ ತಿರುಗೇಟು ನೀಡಿದ್ದ.