ಸಾರಾಂಶ
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ತಮಿಳು ಚಿತ್ರ ಕೂಲಿ ವಿಶ್ವಾದ್ಯಂತ ಬಿಡುಗಡೆಗೊಂಡ ಮೊದಲ ದಿನವೇ ಗಲ್ಲಾ ಪೆಟ್ಟಿಗೆಯಲ್ಲಿ 151 ಕೋಟಿ ರು. ಗಳಿಸಿದೆ.
ನವದೆಹಲಿ: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ತಮಿಳು ಚಿತ್ರ ಕೂಲಿ ವಿಶ್ವಾದ್ಯಂತ ಬಿಡುಗಡೆಗೊಂಡ ಮೊದಲ ದಿನವೇ ಗಲ್ಲಾ ಪೆಟ್ಟಿಗೆಯಲ್ಲಿ 151 ಕೋಟಿ ರು. ಗಳಿಸಿದೆ.
ಇದು ತಮಿಳು ಚಿತ್ರವೊಂದು ಇದುವರೆಗೆ ಗಳಿಸಿದ ಏಕದಿನದ ಅತಿಹೆಚ್ಚು ಮೊತ್ತ ಎಂಬ ದಾಖಲೆ ಸೃಷ್ಟಿಯಾಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಸಿನಿಮಾ ಅವರ ನಿರ್ದೇಶನದ ಇತರ ಚಿತ್ರಗಳು ಮಾಡಿದ್ದ ದಾಖಲೆ ಮುರಿದಿದೆ.
‘ಜಗತ್ತಿನಾದ್ಯಂತ ತೆರೆಕಂಡಿರುವ ತಮಿಳು ಸಿನಿಮಾ ಕೂಲಿ ಮೊದಲ ದಿನ 150 ಕೋಟಿ ರು.ಗೂ ಹೆಚ್ಚು ಸಂಗ್ರಹಿಸಿದೆ. ನಟ ರಜನಿಕಾಂತ್ ದಾಖಲೆ ನಿರ್ಮಾತೃರು ಮತ್ತು ದಾಖಲೆ ಮುರಿಯುವವರಾಗಿದ್ದಾರೆ’ ಎಂದು ಚಿತ್ರ ನಿರ್ಮಾಪಕರು ಎಕ್ಸ್‌ನಲ್ಲಿ ಹೇಳಿದ್ದಾರೆ. ಕೂಲಿ ಸಿನಿಮಾ ಗುರುವಾರ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಅನೇಕ ತಾರಾ ನಟರು ಚಿತ್ರದಲ್ಲಿದ್ದಾರೆ.