ಸಾರಾಂಶ
ಬಾಬಾ ರಾಮದೇವ್ ವಿರುದ್ಧ ದೆಹಲಿ ಹೈಕೋರ್ಟ್ ಗರಂ ಆಗಿದೆ. ‘ಅವರು ಯಾರ ನಿಯಂತ್ರಣಕ್ಕೂ ಸಿಗದೇ ತನ್ನದೇ ಲೋಕದಲ್ಲಿ ಬದುಕುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ನವದೆಹಲಿ: ಶರಬತ್ ಜಿಹಾದ್ ಹೇಳಿಕೆ ಸಂಬಂಧ ನ್ಯಾಯಾಲಯದ ಆದೇಶ ಪಾಲಿಸದ ಯೋಗಗುರು ಬಾಬಾ ರಾಮದೇವ್ ವಿರುದ್ಧ ದೆಹಲಿ ಹೈಕೋರ್ಟ್ ಗರಂ ಆಗಿದೆ. ‘ಅವರು ಯಾರ ನಿಯಂತ್ರಣಕ್ಕೂ ಸಿಗದೇ ತನ್ನದೇ ಲೋಕದಲ್ಲಿ ಬದುಕುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ರೂಹ್ ಅಫ್ಜಾ ಕಂಪನಿ ಶರಬತ್ ಜಿಹಾದ್ ನಡೆಸುತ್ತಿದೆ ಎಂಬ ರಾಮ್‌ದೇವ್ ಹೇಳಿಕೆ ವಿರುದ್ಧ ಇತ್ತೀಚೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಹೈಕೋರ್ಟ್ ಮತ್ತೆ ಅಂಥ ಹೇಳಿಕೆ ನೀಡಬಾರದು, ಆ ಕುರಿತ ವಿಡಿಯೋ ಹಂಚಿಕೊಳ್ಳಬಾರದು ಸೂಚಿಸಿತ್ತು.
ಅದರ ಹೊರತಾಗಿಯೂ ಅವರು ವಿಡಿಯೋ ಹಂಚಿಕೊಂಡಿದ್ದರು. ಇದಕ್ಕೆ ನ್ಯಾಯಾಲಯ ಗರಂ ಆಗಿದ್ದು, ‘ಇದು ಮೇಲ್ನೋಟಕ್ಕೆ ನ್ಯಾಯಾಂಗ ನಿಂದನೆಯಂತೆ ಕಾಣುತ್ತಿದೆ. ಅವರು ಯಾರ ನಿಯಂತ್ರಣದಲ್ಲಿಯೂ ಇಲ್ಲ, ತನ್ನದೇ ಲೋಕದಲ್ಲಿ ವಾಸಿಸುತ್ತಾರೆ. ಅವರಿಗೆ ನಿಂದನೆ ನೋಟಿಸ್ ಜಾರಿ ಮಾಡಿ ನ್ಯಾಯಾಲಯಕ್ಕೆ ಕರೆಸುತ್ತೇವೆ’ ಎಂದಿದೆ.
ವಾಣಿಜ್ಯ ಬಳಕೆ ಎಲ್‌ಪಿಜಿ ಬೆಲೆ ₹14.50 ಇಳಿಕೆ:
ನವದೆಹಲಿ: ಕೇಂದ್ರ ಸರ್ಕಾರವು ಗ್ರಾಹಕರಿಗೆ ಗುಡ್‌ನ್ಯೂಸ್ ನೀಡಿದ್ದು, ವಾಣಿಜ್ಯ ಬಳಕೆ ಎಲ್‌ಪಿಜಿ ದರವನ್ನು 14.50 ಕಡಿತಗೊಳಿಸಿದೆ. ಜೊತೆಗೆ ವಿಮಾನಯಾನದ ಇಂಧನ (ಎಟಿಎಫ್) ದರವನ್ನು ಶೇ.4.4ರಷ್ಟು ಇಳಿಸಿ ಆದೇಶ ಹೊರಡಿಸಿದೆ. ಇದು ಒಂದು ತಿಂಗಳಿನಲ್ಲಿ ನಡೆದ ಎರಡನೇ ದರ ಕಡಿತವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಗೆ ಅನುಗುಣವಾಗಿ ದೇಶೀಯ ಮಾರುಕಟ್ಟೆಯಲ್ಲೂ ದರ ಇಳಿಸಲಾಗಿದೆ. ಹೊಸ ದರದನ್ವಯ ಪ್ರತಿ ಸಾವಿರ ಲೀಟರ್ ಎಟಿಎಫ್ ದರವು 3954 ರು ಕಡಿತದೊಂದಿಗೆ 85,486. ರು.ಗೆ ತಲುಪಿದೆ. ಇನ್ನು 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆ 14.50 ರು.ನಷ್ಟು ಕಡಿತಗೊಂಡಿದೆ. ಪರಿಣಾಮ ದೆಹಲಿಯಲ್ಲಿ ದರ 1747 ಮತ್ತು ಮುಂಬೈನಲ್ಲಿ 1699ಕ್ಕೆ ಇಳಿದಿದೆ.

ಹಿಮಾಚಲ: ಬೈಕ್ ಬಿಟ್ಟು ಮತ್ತೆಲ್ಲಾ ವಾಹನಗಳಲ್ಲಿ ಕಸದ ಬುಟ್ಟಿ ಕಡ್ಡಾಯ
ಶಿಮ್ಲಾ: ಬೈಕ್ ಹೊರತುಪಡಿಸಿ ಉಳಿದ ಎಲ್ಲಾ ಮಾದರಿ ವಾಹನಗಳಲ್ಲಿ ಕಸದ ಬುಟ್ಟಿ ಇಡುವುದು ಕಡ್ಡಾಯಗೊಳಿಸಿ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಬುಧವಾರದಿಂದ ಜಾರಿಗೆ ಬಂದಿರುವ ಈ ಆದೇಶದ ಅನ್ವಯ, ಕಾರು, ಬಸ್ಸು, ಟ್ರಕ್, ಟೆಂಪೋ ಸೇರಿದಂತೆ ಪ್ರಯಾಣಿಕರು ಮತ್ತು ಸರಕು ವಾಹನಗಳಲ್ಲಿ ಕಡ್ಡಾಯವಾಗಿ ಕಸದ ಬುಟ್ಟಿಗಳು ಇರಬೇಕು. ಒಂದು ವೇಳೆ ತಪ್ಪಿದ್ದಲ್ಲಿ ಅವರಿಗೆ 10,000 ರು. ದಂಡ ಹಾಕಲಾಗುತ್ತದೆ. ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಓ), ಪಾರ್ಕಿಂಗ್ ನಿರ್ವಾಹಕರು ಮತ್ತು ಬಸ್ ನಿಲ್ದಾಣಗಳ ಮಾಲೀಕರು ನಿಯಮ ಪಾಲಿಸಬೇಕು ಎಂದು ಸರ್ಕಾರ ಹೇಳಿದೆ.