ನಿವೃತ್ತ ಸಿಜೆಐ ಚಂದ್ರಚೂಡ್‌ ಮನೆಖಾಲಿ ಮಾಡಿಸಿ : ಕೇಂದ್ರಕ್ಕೆ ಪತ್ರ

| N/A | Published : Jul 06 2025, 11:48 PM IST / Updated: Jul 07 2025, 04:59 AM IST

cji dy Chandrachud s farewell speech  know what he said bsm

ಸಾರಾಂಶ

ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ನಿವೃತ್ತಿ ಬಳಿಕವೂ 8 ತಿಂಗಳಿಂದ ತಮಗೆ ಈ ಹಿಂದೆ ನೀಡಿದ್ದ ಅಧಿಕೃತ ಸರ್ಕಾರಿ ವಾಸದಲ್ಲಿ ವಾಸವಿದ್ದು ಅವರನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್‌ನ ಆಡಳಿತ ವಿಭಾಗ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

 ನವದೆಹಲಿ: ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ  ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ನಿವೃತ್ತಿ  ಬಳಿಕವೂ 8 ತಿಂಗಳಿಂದ ತಮಗೆ ಈ ಹಿಂದೆ ನೀಡಿದ್ದ ಅಧಿಕೃತ ಸರ್ಕಾರಿ ವಾಸದಲ್ಲಿ ವಾಸವಿದ್ದು ಅವರನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್‌ನ ಆಡಳಿತ ವಿಭಾಗ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

2022ರ ನವೆಂಬರ್‌ ನಿಂದ 2024ರ ನವೆಂಬರ್‌ವರೆಗೆ ನ್ಯಾ. ಚಂದ್ರಚೂಡ್‌ ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಈ ವೇಳೆ ಅವರಿಗೆ ದೆಹಲಿಯ ಲ್ಯುಟನ್ಸ್‌  ಪ್ರದೇಶದ ನ. 5, ಕೃಷ್ಣ ಮೆನನ್‌ ಮಾರ್ಗದಲ್ಲಿ ಅಧಿಕೃತ ಮನೆ ನೀಡಲಾಗಿತ್ತು. ಆದರೆ ನಿವೃತ್ತಿ ಬಳಿಕ ಇನ್ನೂ 6 ತಿಂಗಳು ಮನೆಯಲ್ಲೇ ಇರಲು ಅವಕಾಶ ನೀಡುವಂತೆ ತಮ್ಮ ನಂತರ ಸಿಜೆಐ ಹುದ್ದೆ ಏರಿದ್ದ ನ್ಯಾ.ಸಂಜೀವ್‌ ಖನ್ನಾಗೆ ಮನವಿ ಮಾಡಿದ್ದರು. ನ್ಯಾ.ಖನ್ನಾ ಕೂಡಾ ತಾವು ಹಿಂದೆ ಇದ್ದ ಮನೆ ತೊರೆದು ಸಿಜೆಐಗಳಿಗೆ ನೀಡುವ ಮನೆಗೆ ಬರಲು ನಿರಾಕರಿಸಿದ್ದರು. ಹೀಗಾಗಿ ನ್ಯಾ.ಚಂದ್ರಚೂಡ್‌ ಮನವಿಯನ್ನು ಕೇಂದ್ರ ಸರ್ಕಾರ ಪುರಸ್ಕರಿಸಿತ್ತು.

ಈ ನಡುವೆ ಚಂದ್ರಚೂಡ್‌ ಕೋರಿಕೆಯಂತೆ ಬಾಡಿಗೆಗೆ ಕೇಂದ್ರ ಸರ್ಕಾರ ಮತ್ತೊಂದು ಮನೆ ನೀಡಿತ್ತು. ಆದರೆ ಅದರ ದುರಸ್ತಿಗೆ ಸಮಯ ಬೇಕಾದ ಕಾರಣ, ಈ ಹಿಂದೆ ಹೇಳಿದಂತೆ 2025ರ ಏಪ್ರಿಲ್‌ನಲ್ಲಿ ಸಿಜೆಐ ಮನೆ ಖಾಲಿ ಮಾಡಲು ಚಂದ್ರಚೂಡ್‌ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಅವರು ಹಾಲಿ ಸಿಜೆಐ ಬಿ.ಆರ್‌.ಗವಾಯಿ ಅವರಿಗೆ ಪತ್ರ ಬರೆದು ಇನ್ನಷ್ಟು ದಿನ ಉಳಿಯಲು ಅವಕಾಶ ಕೋರಿದ್ದರು. ಅದರಂತೆ ಮೇ 31ರಂದು ಚಂದ್ರಚೂಡ್‌ ಮನೆ ಖಾಲಿ ಮಾಡಬೇಕಿತ್ತು. ಆದರೆ ಈ ಅವಧಿಯಲ್ಲು ಅವರು ಮನೆ ಖಾಲಿ ಮಾಡದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನ ಆಡಳಿತ ವಿಭಾಗ ನ್ಯಾ. ಚಂದ್ರಚೂಡ್‌ ಅವರ ತೆರವು ಕೋರಿ ನಗರಾಭಿವೃದ್ಧಿ ಸಚಿವಾಲಯಕ್ಕ ಪತ್ರ ಬರೆದಿದೆ.

ಈ ನಡುವೆ ತಮಗೆ ಪರ್ಯಾಯವಾಗಿ ನೀಡಿರುವ ಮನೆಯ ದುರಸ್ತಿ ಕಾರ್ಯ ನಡೆಯುತ್ತಿದೆ. ಆ ಮನೆಯನ್ನು ತಮ್ಮ ಇಬ್ಬರು ವೈದ್ಯಕೀಯ ಸಮಸ್ಯೆಯಿಂದ ಬಳುತ್ತಿರುವ ಮಕ್ಕಳಿಗೆ ಅನುಕೂಲವಾಗುತ್ತಿರುವ ರೀತಿಯಲ್ಲಿ ಪರಿವರ್ತಿಸಲಾಗುತ್ತಿದೆ. ಈಗಾಗಲೇ ಅಲ್ಲಿಗೆ ತೆರಳಲು ಎಲ್ಲಾ ಸಿದ್ಧತೆ ನಡೆಸಲಾಗಿದೆ. ಕೆಲವೇ ದಿನಗಲ್ಲಿ ನಾವು ಅಲ್ಲಿಗೆ ತೆರಳಲಿದ್ದೇವೆ ಎಂದು ನ್ಯಾ.ಚಂದ್ರಚೂಡ್‌, ಸುಪ್ರೀಂಕೋರ್ಟ್‌ನ ಆಡಳಿತ ವಿಭಾಗಕ್ಕೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

Read more Articles on