ಸಾರಾಂಶ
ಆಪರೇಷನ್ ಸಿಂದೂರ ಮತ್ತು ಮೋದಿಯನ್ನು ಹೊಗಳಿದ ಕೇಂದ್ರದ ಮಾಜಿ ಸಚಿವ , ಸಂಸದ ಶಶಿ ತರೂರ್ ಅವರನ್ನು ಕಾಂಗ್ರೆಸ್ ಪಕ್ಷದ ಶಿಸ್ತಿನ ಲಕ್ಷ್ಮಣ ರೇಖೆ ಮೀರಿದ್ದಾರೆ ಎಂದು ತರಾಟೆಗೆ
ನವದೆಹಲಿ: ಆಪರೇಷನ್ ಸಿಂದೂರ ಮತ್ತು ಮೋದಿಯನ್ನು ಹೊಗಳಿದ ಕೇಂದ್ರದ ಮಾಜಿ ಸಚಿವ , ಸಂಸದ ಶಶಿ ತರೂರ್ ಅವರನ್ನು ಕಾಂಗ್ರೆಸ್ ಪಕ್ಷದ ಶಿಸ್ತಿನ ಲಕ್ಷ್ಮಣ ರೇಖೆ ಮೀರಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ತರೂರ್ ಪ್ರತಿಕ್ರಿಯಿಸಿದ್ದು, ‘ನಾನು ಭಾರತೀಯನಾಗಿ ಹೆಮ್ಮೆಯಿಂದ ನನ್ನ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದೇನೆ’ ಎಂದು ತಿರುಗೇಟು ನೀಡಿದ್ದಾರೆ.
ಬುಧವಾರ ದೆಹಲಿಯ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಲವು ನಾಯಕರು ತರೂರ್ ಪಕ್ಷದ ಶಿಸ್ತಿನ ನಿಯಮ ಮುರಿದಿದ್ದಾರೆ. ಇದು ವೈಯಕ್ತಿಕ ಅಭಿಪ್ರಾಯ ಹೇಳುವ ಸಮಯವಲ್ಲ. ಪಕ್ಷದ ನಿಲುವಿಗೆ ಬದ್ಧವಾಗಿರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿಯಾಗಿತ್ತು.
ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ ಅವರು, ‘ಕೆಲವು ವಿಷಯಗಳ ಬಗ್ಗೆ ನನಗೆ ಜ್ಞಾನವಿದೆ ಕೆಲವರು ಆ ವಿಚಾರಗಳಳ ಬಗ್ಗೆ ನನ್ನಲ್ಲಿ ಅಭಿಪ್ರಾಯ ಕೇಳುತ್ತಾರೆ. ನಾನು ಭಾರತೀಯನಾಗಿ ಹೆಮ್ಮೆಯ ನಾಗರಿಕನಾಗಿ ನನ್ನ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತೇನೆ. ಲಕ್ಷ್ಮಣ ರೇಖೆ ಮೀರಿರುವ ಬಗ್ಗೆಗಿನ ಮಾತುಗಳು ನಾನು ಸಭೆಯಲ್ಲಿದ್ದಾಗ ಚರ್ಚೆಯಾಗಿಲ್ಲ. ಈ ಅಭಿಪ್ರಾಯ ಎಲ್ಲಿಂದ ಬಂದಿದೆ ಗೊತ್ತಿಲ್ಲ. ಹೀಗಾಗಿ ಇದರ ಬಗ್ಗೆ ವೈಯಕ್ತಿ ಅಭಿಪ್ರಾಯ ವ್ಯಕ್ತಪಡಿಸುವಲ್ಲಿ ಅರ್ಥವಿಲ್ಲ’ ಎಂದಿದ್ದಾರೆ.