ಭೂಮಿಯಾಳದಲ್ಲಿ ಬೃಹತ್‌ ಗಾತ್ರದ ಜಗತ್ತಿನ 6ನೇ ಮಹಾಸಾಗರ ಪತ್ತೆ! ವಿಜ್ಞಾನಿಗಳ ತಂಡವೊಂದು ಘೋಷಣೆ

| Published : Oct 15 2024, 10:44 AM IST

Unsolved mysteries of the ocean that still keep you awake at night See in the picture

ಸಾರಾಂಶ

ವಿಜ್ಞಾನಿಗಳ ತಂಡವೊಂದು ಇದೀಗ 6ನೇ ಮಹಾಸಾಗರ ಪತ್ತೆಯ ಘೋಷಣೆ ಮಾಡಿದೆ. ಭೂಮಿಯ ಮೇಲ್ಮೈನಿಂದ 700 ಕಿ.ಮೀ ಆಳದಲ್ಲಿರುವ ಈ ಸಮುದ್ರ, ಹಾಲಿ ಭೂಮಿಯ ಮೇಲಿರುವ 3 ಸಮುದ್ರಗಳ ಒಟ್ಟು ವಿಸ್ತೀರ್ಣದಷ್ಟು ಬೃಹತ್‌ ಗಾತ್ರ ಹೊಂದಿದೆ

ವಾಷಿಂಗ್ಟನ್‌: ಮಾನವ ಕುಲಕ್ಕೆ ಇದುವರೆಗೂ ತಿಳಿದಿರುವ ಪ್ರಕಾರ ಭೂಮಿಯ ಮೇಲಿರುವುದು 5 ಸಮುದ್ರ. ಅವುಗಳೆಂದರೆ ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಅರ್ಕ್ಟಿಕ್, ಅಂಟಾರ್ಟಿಕಾ ಮಹಾಸಾಗರಗಳು. ಆದರೆ ವಿಜ್ಞಾನಿಗಳ ತಂಡವೊಂದು ಇದೀಗ 6ನೇ ಮಹಾಸಾಗರ ಪತ್ತೆಯ ಘೋಷಣೆ ಮಾಡಿದೆ.

ಭೂಮಿಯ ಮೇಲ್ಮೈನಿಂದ 700 ಕಿ.ಮೀ ಆಳದಲ್ಲಿರುವ ಈ ಸಮುದ್ರ, ಹಾಲಿ ಭೂಮಿಯ ಮೇಲಿರುವ 3 ಸಮುದ್ರಗಳ ಒಟ್ಟು ವಿಸ್ತೀರ್ಣದಷ್ಟು ಬೃಹತ್‌ ಗಾತ್ರ ಹೊಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ನಾರ್ತ್‌ವೆಸ್ಟರ್ನ್‌ ವಿವಿಯ ವಿಜ್ಞಾನಿಗಳ ತಂಡ ಭೂಮಿಯ ಕಂಪನ ಅಳೆಯಲು ಬಳಸುವ ಸಿಸ್ಮೋಗ್ರಾಫ್‌ಗಳನ್ನು ಅಮೆರಿಕದಾದ್ಯಂತ 2000 ಸ್ಥಳಗಳಲ್ಲಿ ಅಳವಡಿಸಿದ್ದಾರೆ. ಇವುಗಳಿಂದ ಸಂಗ್ರಹಿಸಿದ 500 ಭೂಕಂಪನಗಳ ಕುರಿತು ಅವರು ಅಧ್ಯಯನ ಮಾಡಿದ್ಧಾರೆ. ಈ ವೇಳೆ ಕೆಲ ಕಡೆಗಳಲ್ಲಿ ಅಲೆಯ ತೀವ್ರತೆ ಕಡಿಮೆಯಾಗಿದ್ದನ್ನು ಕಂಡಿದ್ದಾರೆ. ಇದು ಅಲ್ಲಿನ ನೀರಿನ ಇರುವಿಕೆಯನ್ನು ಸೂಚಿಸುತ್ತಿದೆ. ರಿಂಗ್‌ವುಡೈಟ್‌ ಎಂಬ ಮೆತ್ತಗಿನ ನೀಲಿ ಕಲ್ಲುಗಳ ಮಧ್ಯ ಈ ನೀರು ಬಂಧಿಯಾಗಿರಬಹುದು. ಭೂಮಿಯಾಳದಿಂದ ಒಸರಿದ ನೀರಿನಿಂದ ಈ ಸಮುದ್ರ ಸೃಷ್ಟಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.