ಮರವಂತೆ: ಸಮುದ್ರ ಸೇರಿದ 115 ಆಮೆ ಮರಿ!
Mar 15 2025, 01:02 AM IST40 ದಿನಗಳ ಹಿಂದೆ ಮರವಂತೆ ಮತ್ತು ತಾರಾಪತಿ ಕಡಲ ಕಿನಾರೆಯಲ್ಲಿ ಕಡಲಾಮೆಗಳ ಮೊಟ್ಟೆಗಳಿಟ್ಟಿದ್ದವು. ಅವುಗಳನ್ನು ಸ್ಥಳೀಯ ಆಸಕ್ತರು ಗುರುತಿಸಿ, ಅವುಗಳ ಸುತ್ತ ಆವರಣ, ಹ್ಯಾಚರಿ (ಮೊಟ್ಟೆಕೇಂದ್ರ) ನಿರ್ಮಿಸಿ ಸಂರಕ್ಷಣೆ ಮಾಡಿದ್ದರು. ಅದರಲ್ಲಿ ಮರವಂತೆ ‘ಹ್ಯಾಚರಿ’ಯಲ್ಲಿ ಗುರುವಾರ ರಾತ್ರಿ ಮೊಟ್ಟೆಗಳು ಒಡೆದು ಸುಮಾರು 115 ಮರಿಗಳು ಹೊರಬಂದು ಕಡಲು ಸೇರಿವೆ.