ಸಾರಾಂಶ
ಮಹಿಳೆಯರನ್ನು ಗರ್ಭಿಣಿ ಮಾಡುವ ಉದ್ಯೋಗದ ಆಫರ್ ನೀಡಿ ಜನರನ್ನು ವಂಚಿಸುತ್ತಿದ್ದ ಇಬ್ಬರನ್ನು ಹರ್ಯಾಣದ ನೂಹ್‌ನಲ್ಲಿ ಬಂಧಿಸಲಾಗಿದೆ.
ನೂಹ್: ಮಹಿಳೆಯರನ್ನು ಗರ್ಭಿಣಿ ಮಾಡುವ ಉದ್ಯೋಗದ ಆಫರ್ ನೀಡಿ ಜನರನ್ನು ವಂಚಿಸುತ್ತಿದ್ದ ಇಬ್ಬರನ್ನು ಹರ್ಯಾಣದ ನೂಹ್‌ನಲ್ಲಿ ಬಂಧಿಸಲಾಗಿದೆ.
ಬಂಧಿತ ಅಜಾಜ್ ಹಾಗೂ ಇರ್ಷಾಂದ್ ನಾಲ್ಕು ನಕಲಿ ಫೇಸ್‌ಬುಕ್ ಖಾತೆಗಳನ್ನು ತೆರೆದು, ಅದರ ಮೂಲಕ ನಕಲಿ ಜಾಹೀರಾತುಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಮಹಿಳೆಯರನ್ನು ಗರ್ಭಿಣಿ ಮಾಡುವವರಿಗೆ ಹಣ ನೀಡುವುದಾಗಿ ಪ್ರಕಟಿಸಿದ್ದರು. ಜೊತೆಗೆ ಮಹಿಳೆಯರ ನಕಲಿ ಚಿತ್ರಗಳನ್ನು ಹಂಚಿಕೊಂಡಿದ್ದರು.
ಇದಕ್ಕಾಗಿ ಜನರಿಂದ ನೋಂದಣಿ ಶುಲ್ಕ ಮತ್ತು ಇತರೆ ಶುಲ್ಕಗಳ ಹೆಸರಲ್ಲಿ ಸಾಕಷ್ಟು ಹಣ ಸಂಗ್ರಹಿಸುತ್ತಿದ್ದರು. ಹಣ ಪಾವತಿಯಾದ ಬಳಿಕ ಅವರ ಬ್ಲಾಕ್ ಮಾಡುತ್ತಿದ್ದರು. ಈ ಕುರಿತು ಕೆಲಸ ವಂಚಿತ ಕೆಲ ವ್ಯಕ್ತಿಗಳು ನೀಡಿದ ದೂರಿನ ಆಧಾರದ ಮೇಲೆ ಇವರನ್ನು ಪೊಲೀಸರು ಬಂಧಿಸಿದ್ದಾರೆ.