ಸಾರಾಂಶ
ಜನವರಿಯಲ್ಲಿ ನಟ ಸೈಫ್ ಅಲಿ ಖಾನ್ ಅವರ ಮೇಲೆ ದಾಳಿ ನಡೆದ ಬಳಿಕ ಪತ್ನಿ ಕರೀನಾ ಕಪೂರ್ ಮೇಲೆಯೂ ಸಹ ದಾಳಿಯ ಯತ್ನ ನಡೆದಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.
ಮುಂಬೈ: ಜನವರಿಯಲ್ಲಿ ನಟ ಸೈಫ್ ಅಲಿ ಖಾನ್ ಅವರ ಮೇಲೆ ದಾಳಿ ನಡೆದ ಬಳಿಕ ಪತ್ನಿ ಕರೀನಾ ಕಪೂರ್ ಮೇಲೆಯೂ ಸಹ ದಾಳಿಯ ಯತ್ನ ನಡೆದಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.
ಆಸ್ಪತ್ರೆಯಿಂದ ಬಿಡುಗಡೆಯಾದ ಸೈಫ್‌ರನ್ನು ಮನೆಗೆ ಕರೆತರಲು ಕರೀನಾ ಆಸ್ಪತ್ರೆಗೆ ಹೊರಟಿದ್ದರು. ಈ ವೇಳೆ ಸೈಫರ್‌ರನ್ನು ಮನೆಗೆ ಕರೆತರುವ ವೇಳೆ ಕರೀನಾ ಅವರ ಕಾರಿನ ಮೇಲೆ ಅನಾಮಿಕರು ದಾಳಿ ಮಾಡಿ, ಕಾರು ಅಲುಗಾಡುವಂತೆ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಕರೀನಾ, ವಾಪಸ್ ಮನೆಗೆ ತೆರಳಿ ಸೈಫ್‌ರನ್ನು ಮನೆಗೆ ತರುವ ಹೊಣೆ ನನಗೆ ವಹಿಸಿದ್ದರು ಎಂದು ಹಾಲಿ ನಟನ ಮನೆಯ ಭದ್ರತೆ ವಹಿಸಿಕೊಂಡಿರುವ ರೋನಿತ್ ರಾಯ್ ಹೇಳಿದ್ದಾರೆ.