ಡಿ.1ರಿಂದ ಮೊಬೈಲ್‌ಗೆ ಒಟಿಪಿ ಬಂದ್‌ ಆತಂಕ : ಬ್ಯಾಂಕಿಂಗ್‌ ಸೇರಿ ವಿವಿಧ ವ್ಯವಹಾರಗಳಲ್ಲಿ ಒಟಿಪಿ ಮೇಲೇ ಅವಲಂಬಿತ ಆಗಿರುವ ಜನರಿಗೆ ತೊಂದರೆ

| Published : Nov 27 2024, 01:01 AM IST / Updated: Nov 27 2024, 07:55 AM IST

ಡಿ.1ರಿಂದ ಮೊಬೈಲ್‌ಗೆ ಒಟಿಪಿ ಬಂದ್‌ ಆತಂಕ : ಬ್ಯಾಂಕಿಂಗ್‌ ಸೇರಿ ವಿವಿಧ ವ್ಯವಹಾರಗಳಲ್ಲಿ ಒಟಿಪಿ ಮೇಲೇ ಅವಲಂಬಿತ ಆಗಿರುವ ಜನರಿಗೆ ತೊಂದರೆ
Share this Article
  • FB
  • TW
  • Linkdin
  • Email

ಸಾರಾಂಶ

‘ಫೋನ್‌ಗಳಿಗೆ ಬರುವ ಒಟಿಪಿಗಳ ಮೂಲ ಪತ್ತೆ ಮಾಡಲು ಅನುವು ಮಾಡಿಕೊಡುವ ನಿಯಮಕ್ಕೆ ಒಪ್ಪಿಗೆ ನೀಡಬೇಕು’ ಎಂದು ಟೆಲಿಕಾಂ ಕಂಪನಿಗಳಿಗೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ವಿಧಿಸಿರುವ ಗಡುವು ನ.30ರಂದು ಮುಕ್ತಾಯವಾಗಲಿದೆ.

ನವದೆಹಲಿ: ‘ಫೋನ್‌ಗಳಿಗೆ ಬರುವ ಒಟಿಪಿಗಳ ಮೂಲ ಪತ್ತೆ ಮಾಡಲು ಅನುವು ಮಾಡಿಕೊಡುವ ನಿಯಮಕ್ಕೆ ಒಪ್ಪಿಗೆ ನೀಡಬೇಕು’ ಎಂದು ಟೆಲಿಕಾಂ ಕಂಪನಿಗಳಿಗೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ವಿಧಿಸಿರುವ ಗಡುವು ನ.30ರಂದು ಮುಕ್ತಾಯವಾಗಲಿದೆ. 

ಟೆಲಿಕಾಂ ಕಂಪನಿಗಳು ಇದಕ್ಕೆ ಒಪ್ಪಿಗೆ ನೀಡಿ ಜಾರಿ ಮಾಡದೇ ಹೋದರೆ ಡಿ.1ರಿಂದ ಒಟಿಪಿ ಬರುವುದು ಸ್ಥಗಿತವಾಗಲಿದೆ.ಒಟಿಪಿ (ಒನ್‌ ಟೈಂ ಪಾಸ್‌ವರ್ಡ್‌) ಸ್ಥಗಿತಗೊಂಡರೆ ಬ್ಯಾಂಕಿಂಗ್‌ ಸೇರಿ ವಿವಿಧ ವ್ಯವಹಾರಗಳಲ್ಲಿ ಒಟಿಪಿ ಮೇಲೇ ಅವಲಂಬಿತ ಆಗಿರುವ ಜನರಿಗೆ ತೊಂದರೆ ಆಗಲಿದೆ.

ಅಕ್ರಮವಾಗಿ ಒಟಿಪಿಗಳನ್ನು ಕೇಳಿ ಹಣ ಲಪಟಾಯಿಸುವ ವಂಚನೆಗಳು ನಡೆಯುತ್ತಿರುವ ಕಾರಣ ಟ್ರಾಯ್‌, ಇಂಥ ಒಟಿಪಿಗಳ ಮೂಲ ಪತ್ತೆ ಮಾಡುವ ನಿಯಮ ಜಾರಿಗೆ ಈ ಹಿಂದೆ ಹಲವು ಬಾರಿ ಗಡುವು ನೀಡಿತ್ತು. ಆದರೆ ವೊಡಾಫೋನ್‌, ಏರ್‌ಟೆಲ್‌, ಜಿಯೋ ಹಾಗೂ ಬಿಎಸ್ಸೆನ್ನೆಲ್‌ ಕೋರಿಕೆ ನಂತರ ಅದನ್ನು ನ.30ಕ್ಕೆ ವಿಸ್ತರಿಸಿತ್ತು.