ಸಾರಾಂಶ
ಪಹಲ್ಗಾಂ ಉಗ್ರ ದಾಳಿ ಹಿಂದೆ ಸ್ಥಳೀಯರ ಕುಮ್ಮಕ್ಕಿನ ಶಂಕೆ ವ್ಯಕ್ತವಾಗಿರುವ ನಡುವೆಯೇ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್
ನವದೆಹಲಿ: ಪಹಲ್ಗಾಂ ಉಗ್ರ ದಾಳಿ ಹಿಂದೆ ಸ್ಥಳೀಯರ ಕುಮ್ಮಕ್ಕಿನ ಶಂಕೆ ವ್ಯಕ್ತವಾಗಿರುವ ನಡುವೆಯೇ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ಅದರಲ್ಲಿ ಪ್ರವಾಸಿಗರೊಬ್ಬರನ್ನು ಜಿಪ್‌ಲೈನ್ ಸವಾರಿಗೆ ಕಳುಹಿಸುವ ಮುನ್ನವೇ ಗುಂಡಿನ ಸದ್ದು ಕೇಳಿಸಿದರೂ ನಿರ್ವಾಹಕ ಅಲ್ಲಾ ಹು ಅಕ್ಬರ್ ಕೂಗಿ ಸುಮ್ಮನಾಗಿರುವುದು ಸೆರೆಯಾಗಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಗುಜರಾತ್ ಮೂಲದ ಪ್ರವಾಸಿಗರನ್ನು ಜಿಪ್‌ಲೈನ್ ಸವಾರಿಗೆ ಕಳುಹಿಸುವಾಗ ನಿರ್ವಾಹಕ ಹಿಂದಿನಿಂದ ಗುಂಡಿನ ಸದ್ದು ಕೇಳಿಸಿದೆ. ಮಾತ್ರವಲ್ಲದೇ ಅಷ್ಟರಲ್ಲಾಗಲೇ ಭಯೋತ್ಪಾದಕ ದಾಳಿಗೆ ಬೆದರಿ ಪ್ರವಾಸಿಗರು ಅಲ್ಲಿಂದ ಭಯದಿಂದ ಓಡಲು ಶುರು ಮಾಡಿದ್ದರು.
ಹೀಗಿದ್ದರೂ ಜಿಪ್‌ಲೈನ್ ನಿರ್ವಾಹಕ ಪ್ರವಾಸಿಗರನ್ನು ರಕ್ಷಿಸಿದೇ ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿ ಸುಮ್ಮನಾಗಿದ್ದಾನೆ. ಇದು ವಿಡಿಯೋದಲ್ಲಿ ಸೆರೆಯಾಗಿದ್ದು, ಇದನ್ನು ನೋಡಿದ ಬಹುತೇಕರು ಅಲ್ಲಿ ಉಗ್ರ ದಾಳಿ ನಡೆಯುವುದು ಆ ನಿರ್ವಾಹಕನಿಗೆ ಮೊದಲೇ ಗೊತ್ತಿತ್ತು ಎಂದು ಕಾಣುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಅಹಮದಾಬಾದ್ ಮೂಲದ ಪ್ರವಾಸಿಗ ಗುಂಡಿನ ದಾಳಿಯ ಅರಿವಿಲ್ಲದೇ ಜಪ್‌ಲೈನ್ ಸವಾರಿ ಪೂರ್ಣಗೊಳಿಸಿದ್ದಾನೆ. ಈ ವೇಳೆ ಆತ ಮಾಡಿದ ಸೆಲ್ಫಿ ವಿಡಿಯೋದಲ್ಲಿ ಉಗ್ರರ ದಾಳಿ, ಪ್ರಯಾಣಿಕರು ಓಡುತ್ತಿರುವ ದೃಶ್ಯ ಸೆರೆಯಾಗಿದೆ.