ಸಾರಾಂಶ
-ಕ್ಷೇತ್ರದ ಜನಪ್ರತಿನಿಧಿಯಾಗಿ ತಾಲೂಕಿನ ಹಲವು ಜ್ವಲಂತ ಸಮಸ್ಯೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಕ್ಷೇತ್ರದ ಜನಪ್ರತಿನಿಧಿಯಾಗಿ ತಾಲೂಕಿನ ಹಲವು ಜ್ವಲಂತ ಸಮಸ್ಯೆಗಳನ್ನು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ಸಚಿವರುಗಳಿಂದ ಉತ್ತರ ಪಡೆದಿದ್ದೇನೆ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಒಬ್ಬ ಸಾಮಾನ್ಯ ರೈತನ ಮಗನಾಗಿ ಈ ಕ್ಷೇತ್ರದ ಶಾಸಕನಾಗಿ ಆಯ್ಕೆ ಮಾಡಿರುವ ಮತದಾರರಿಗೆ ಗೌರವ ತರುವ ಕೆಲಸ ಮಾಡುವ ದೃಷ್ಟಿಯಿಂದ ಹಲವು ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದಿರುವುದಾಗಿ ಹೇಳಿದರು.ಹಿರಿಯ ಮುತ್ಸದ್ದಿ, ಸಾಹಿತಿಗಳ, ಪತ್ರಕರ್ತರ ಮಾರ್ಗದರ್ಶನ ಪಡೆದು ತಾಲೂಕಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಬೆಳಗಾವಿಯ ಅಧಿವೇಶನದ ಮೊದಲ ದಿನವೇ ತಾಲೂಕಿನ ಪಶುಸಂಗೋಪನಾ ಇಲಾಖೆ ಸಮಸ್ಯೆಗಳನ್ನು ಚರ್ಚಿಸಿದ್ದೇನೆ. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಪಶುಸಂಗೋಪನಾ ಸಚಿವರು ನಿಮ್ಮ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಪರಿಹರಿಸಿಕೊಡುತ್ತೇವೆಂಬ ಆಶ್ವಾಸನೆ ನೀಡಿದ್ದಾರೆ ಎಂದರು.
ಬರದ ಮೇಲೆ ಚರ್ಚೆ ಮಾಡುವ ವೇಳೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯಲ್ಲಿ ಕೆರೆಕಟ್ಟೆಗಳ ಬಗ್ಗೆ ಚರ್ಚಿಸಿದ್ದೇನೆ. ಇದಕ್ಕೆ ಸರ್ಕಾರದ ಸಚಿವರು ಪೂರಕವಾಗಿ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ತಾಲೂಕಿನ ಡೀಮ್ಡ್ ಅರಣ್ಯ ಪ್ರದೇಶದ ಬಗ್ಗೆ ಕಳೆದ ಅಧಿವೇಶನದಲ್ಲಿ ಚರ್ಚಿಸಿದ್ದೆ. ಆದರೆ, ಈ ಅಧಿವೇಶನದಲ್ಲಿ ಚರ್ಚಿಸಲು ಅವಕಾಶ ಸಿಗಲಿಲ್ಲ ಎಂದರು.ಇದು ರಾಜ್ಯದ ಸಾರ್ವಜನಿಕರ ಸಮಸ್ಯೆಯಾಗಿದ್ದು, ಕೇಂದ್ರ ಸರ್ಕಾರದ ಅಂಗಳದಲ್ಲಿದೆ. ಮುಂದಿನ ದಿಗಳಲ್ಲಿ ಕ್ರಮಕೈಗೊಳ್ಳುವ ವಿಶ್ವಾಸವಿದೆ. ಒಳಚರಂಡಿ ವ್ಯವಸ್ಥೆ ಹಾಗೂ ಹೇಮಾವತಿ ಬಡಾವಣೆಯ ನಿವೇಶನದ ಬಗ್ಗೆ ಚರ್ಚಿಸಲು ಅವಕಾಶ ಕೋರಿದೆ. ಇದು ಚರ್ಚಿತ ವಿಷಯವಾದ್ದರಿಂದ ಸಮಯ ಕಡಿಮೆಯಿರುವ ಕಾರಣ ಮುಂದಿನ ಅಧಿವೇಶನದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಹೇಮಾವತಿ ನೀರಾವರಿ ಇಲಾಖೆ ಆಧುನೀಕರಣ ವೇಳೆ ನಡೆದಿರುವ ಅವ್ಯವಹಾರ ಕುರಿತ ಚರ್ಚೆಗೆ ಅವಕಾಶ ಕೇಳಿದೆ. ಬಡ್ತಿ, ಅಥಿತಿ ಉಪನ್ಯಾಸಕರ ಸಮಸ್ಯೆಗಳು, ಕೆಪಿಟಿಸಿಎಲ್ ಹಂಗಾಮಿ ನೌಕರರ ವಿಷಯ, ತೋಟಗಾರಿಕೆ ಇಲಾಖೆಯ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿ ಕೇಳಿ ಲಿಖಿತ ಉತ್ತರ ಪಡೆದಿದ್ದೇನೆ ಎಂದರು.ಆದಿಹಳ್ಳಿ ಗ್ರಾಮದಲ್ಲಿ 2016ರಲ್ಲಿ ಹಿಂ.ವ. ಕಾಲೇಜು ಸ್ಥಾಪನೆ ಆಗಿದೆ ಎಂದು ದಾಖಲೆಗಳು ಹೇಳುತ್ತಿವೆ. ಆದರೆ, ಭೌತಿಕವಾಗಿ ಕಾಲೇಜು ಸ್ಥಾಪನೆಯಾಗಿಲ್ಲ. ಇದರ ಬಗ್ಗೆ ಚರ್ಚಿಸಿದಾಗ ಶಾಸಕರು ಸಂಬಂಧಿಸಿದ ದಾಖಲೆ ತೆಗೆದುಕೊಂಡು ಬಂದರೆ ಕುಳಿತು ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಚರ್ಮ, ಮೂಳೆ, ಕಣ್ಣು ಸೇರಿದಂತೆ ವೈದ್ಯರ ಕೊರತೆ, ಯುಜಿಡಿ ಸಮಸ್ಯೆ, ಕಲ್ಲುಬೆಂಚು ಅಳವಡಿಕೆ, ಶೀಳನೆರೆ ಗ್ರಾಮದ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವಿಕೆ ಕುರಿತಂತೆ ಚರ್ಚಿಸಲು ಅವಕಾಶ ಸಿಗುತ್ತಿದ್ದ ವೇಳೆ ಅಧಿವೇಶನದಲ್ಲಿ ಗಲಾಟೆ ನಡೆದಿದ್ದರಿಂದ ಅಧಿವೇಶನವನ್ನು 2 ದಿನ ಮುಂದೂಡಲಾಯಿತು. ಸ್ಪೀಕರ್ ಮುಂದಿನ ದಿನಗಳಲ್ಲಿ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದ್ದಾರೆ. ತಾಲೂಕಿನಲ್ಲಿ ಆಯುರ್ವೇದ ಆಸ್ಪತ್ರೆಗೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಲಿಖಿತ ಉತ್ತರ ನೀಡಿದ್ದು ಮುಂದಿನ ದಿನಗಳಲ್ಲಿ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.ಬಾಕ್ಸ್..........
ಉಪವಾಸ ಸತ್ಯಾಗ್ರಹಕ್ಕೆ ತಾರ್ಕಿಕ ಅಂತ್ಯಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮತ್ತು ವಿವಿಧ ಸಂಘಟನೆಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಚಳವಳಿ ಮತ್ತು ಉಪವಾಸ ಸತ್ಯಾಗ್ರಹಕ್ಕೆ ತಾರ್ಕಿಕ ಅಂತ್ಯ ಹಾಡೋಣ ಎಂದು ತಿಳಿಸಿದ್ದೇನೆ. ಕಾವೇರಿ ವಿಷಯದಲ್ಲಿ ಸರ್ಕಾರ ತುಂಬಾ ಲಘುವಾಗಿ ಪರಿಗಣಿಸಿದೆ ಎಂದು ದೂರಿದರು.
ಈ ವಿಷಯ ಚರ್ಚಿಸಿದ ಸಮಯದಲ್ಲಿ ಸರ್ಕಾರದಿಂದ ಸ್ಪಷ್ಟವಾದ ಉತ್ತರ ಸಿಗಲಿಲ್ಲ. ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಿದ್ದರೂ ಚರ್ಚೆ ಸಮಯದಲ್ಲಿ ಸಮರ್ಪಕ ಉತ್ತರ ನೀಡದೇ ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಂತರ ತಿಳಿಸುತ್ತೇನೆ ಎಂದು ಹಾರಿಕೆ ಉತ್ತರ ನೀಡಿದರು ಎಂದು ಬೇಸರ ವ್ಯಕ್ತಪಡಿಸಿದರು.ಜೆಡಿಎಸ್ ತಾಲೂಕು ಅಧ್ಯಕ್ಷ ಜಾನಕೀರಾಂ ಮಾತನಾಡಿ, ಶಾಸಕರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದರೂ ಎರಡನೇ ಅಧಿವೇಶನದಲ್ಲಿ ಸಿಕ್ಕಿದ್ದ ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡು ತಾಲೂಕಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಉತ್ತರ ಪಡೆದಿರುವುದು ತಾಲೂಕಿನ ಮತದಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿರುವುದು ಸಂತಸ ತಂದಿದೆ ಎಂದು ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ರಾಜ್ಯ ಮಾರಾಟ ಮಹಾಮಂಡಳಿ ನಿರ್ದೇಶಕ ಎಸ್.ಎಲ್.ಮೋಹನ್, ಜಿಲ್ಲಾ ಜೆಡಿಎಸ್ ಉಪಾದ್ಯಕ್ಷ ನಾಗೇಶ್, ಸಂತೆಬಾಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ರವಿಕುಮಾರ್, ಜೆಡಿಎಸ್ ಮುಖಂಡರಾದ ಹುಲ್ಲೇಗೌಡ, ಜೈನ್ನಹಳ್ಳಿ ದಿನೇಶ್, ತಾಪಂ ಮಾಜಿ ಸದಸ್ಯ ಮೋಹನ್, ಮಾಂಬಳ್ಳಿ ಅಶೋಕ್ ಸೇರಿದಂತೆ ಹಲವರು ಇದ್ದರು.ಫೋಟೊ.......
16ಕೆಎಂಎನ್ ಡಿ11ಕೆ.ಆರ್ .ಪೇಟೆ ತಾಪಂನ ತಮ್ಮ ಕಚೇರಿಯಲ್ಲಿ ಶಾಸಕ ಹೆಚ್.ಟಿ.ಮಂಜು ಸುದ್ದಿಗೋಷ್ಠಿ ನಡೆಸಿದರು.