ಇಂದಿನ ಯುಗದಲ್ಲಿ ಶಿಕ್ಷಣ ಅತೀ ಅವಶ್ಯಕ

| Published : Jan 05 2024, 01:45 AM IST

ಸಾರಾಂಶ

ತಿಯೊಬ್ಬರು ಶಿಕ್ಷಕಣವಂತರಾಗಬೇಕು. ಮಕ್ಕಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಂಡು ಪ್ರಸ್ತುತದ ಮುಂದುವರೆದ ಜಗತ್ತಿನಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಆಧುನಿಕತೆ, ವೈಜ್ಞಾನಿಕ ಮತ್ತು ತಾಂತ್ರಿಕತೆಯ ಅರಿವು ಮೂಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಇಂದಿನ ಯುಗದಲ್ಲಿ ಶಿಕ್ಷಣ ಅತೀ ಅವಶ್ಯಕವಾಗಿದೆ. ಹೀಗಾಗಿ ಪ್ರತಿಯೊಬ್ಬರು ಉನ್ನತ ಶಿಕ್ಷಕಣ ಪಡೆಯಬೇಕು ಎಂದು ಕೆಎಲ್‌ಇ ಪದವಿ ಕಾಲೇಜಿನ ಮುಖ್ಯ ಗುರು ಕಲ್ಲಪ್ಪ ಅವರಾದಿ ಹೇಳಿದರು.

ಸ್ಥಳೀಯ ಕೆಎಲ್ಇ ಕಾಲೇಜಿನಲ್ಲಿ ನಡೆದ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ಸಮಾರಂಭ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿ ಪ್ರತಿಯೊಬ್ಬರು ಶಿಕ್ಷಕಣವಂತರಾಗಬೇಕು. ಮಕ್ಕಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಂಡು ಪ್ರಸ್ತುತದ ಮುಂದುವರೆದ ಜಗತ್ತಿನಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಆಧುನಿಕತೆ, ವೈಜ್ಞಾನಿಕ ಮತ್ತು ತಾಂತ್ರಿಕತೆಯ ಅರಿವು ಮೂಡಿಸಿಕೊಳ್ಳಬೇಕು. ದೇಶದ ಬಗ್ಗೆ ಗೌರವ ಭಾವನೆ ಹೊಂದಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಮಾತನಾಡಿದ ಪತ್ರಕರ್ತ ಮಲ್ಲಿಕಾರ್ಜುನ್ ಹೆಗ್ಗಳಗಿ ರಾಷ್ಟ್ರ ನಾಯಕರ ಬಗ್ಗೆ ಟೀಕೆ ಮಾಡುವ ಮನೋಭಾವ ಹೋಗಬೇಕು, ಯುವಕರು ಹೋರಾಟಗಾರರ ತ್ಯಾಗ ಬಲಿದಾನದ ಸ್ಫೂರ್ತಿ ಪಡೆದುಕೊಂಡು ಉತ್ತಮ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಜೊತೆಗೆ ಕಲೆ, ಸಂಸ್ಕೃತಿಯನ್ನು ಬೆಳೆಸಿಕೋಳ್ಳಬೇಕು ಎಂದರು.

ಇಂದಿನ ಆಧುನಿಕ ಭಾರತದಲ್ಲಿ ಮಹಿಳೆಯರು ಪುರುಷರಿಗೆ ಸರಿಸಮನಾಗಿ ಬೆಳೆದು ಎಲ್ಲ ರಂಗಗಳಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದ್ದಾಳೆ. ರಾಜಕೀಯ, ವಿಜ್ಞಾನ, ಕ್ರೀಡೆ, ಶಿಕ್ಷಣ ಹೀಗೆ ಎಲ್ಲ ರಂಗಗಳನ್ನು ಅಳುತ್ತಿದ್ದಾಳೆ. ಅದು ನಮ್ಮೆಲ್ಲರ ಹೆಮ್ಮೆ. ಇದಕ್ಕೆಲ್ಲಾ ಮೂಲ ಕಾರಣ ಶಿಕ್ಷಣ. ಅದಕ್ಕಾಗಿ ಎಲ್ಲರೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದಾರೆ. ತೊಟ್ಟಿಲು ತೂಗುವ ಕೈ ಜಗತ್ತನ್ನು ಆಳಬಲದು ಎಂದು ತೋರಿಸುತ್ತಿದ್ದಾಳೆ ಎಂದರು.

ಇಂದಿನ ಮಕ್ಕಳು ನಾಳಿನ ಭವ್ಯ ಭಾರತದ ಸತ್ಪ್ರಜೆಗಳು ದೇಶದ ಪ್ರಗತಿಯಲ್ಲಿ ಶಿಕ್ಷಣದ ಪಾತ್ರ ಬಹುಮುಖ್ಯವಾಗಿದೆ. ಅದಕ್ಕಾಗಿ ಗುಣಾತ್ಮಕ ಶಿಕ್ಷಣ ಕೊಡಬೇಕು. ವಿದ್ಯಾರ್ಥಿಗಳು ಕಠಿಣ ಶ್ರಮದಿಂದ ವ್ಯಾಸಂಗ ಮಾಡಿ ಶೈಕ್ಷಣಿಕ ಅಭಿವೃದ್ಧಿ ಹೊಂದಿ ಉನ್ನತ ಸಾಧನೆಗೈದು ದೇಶಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯವರು ಮಲ್ಲಿಕಾರ್ಜುನ ಹೆಗ್ಗಳಗಿ, ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಕಾನಿಪ ಕಾರ್ಯದರ್ಶಿ ಹನಮಂತ ನಾವಿ ಇವರನ್ನು ಸನ್ಮಾನ ಮಾಡಿ ಗೌರವಿಸಿದರು.

ಈ ಸಂಧರ್ಭದಲ್ಲಿ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಅಶೋಕ.ಬಿ.ಅಂಗಡಿ, ಸಂತೋಶ ಹುದ್ದಾರ ಐಕ್ಯೂಎಸಿ ಪತ್ರಕರ್ತ ಜಯರಾಂ ಶೆಟ್ಟಿ, ಪತ್ರಕರ್ತ ಮೀರಾ ತಟಗಾರ, ಸಂಯೋಜಕರಾದ ಡಾ.ಎಸ್.ಡಿ.ಸೊರಗಾಂವಿ, ಸಿಬ್ಬಂದಿ ಕಾರ್ಯಧ್ಯಕ್ಷ ಎ.ಎಮ್.ಉಗಾರೆ, ಸಾಂಸ್ಕೃತಿಕ ವಿಭಾಗ ಮುಖ್ಯಸ್ಥ ಸಿ.ಎಮ್.ಐಗಳಿ, ಡಾ.ಎ.ಎಮ್.ನರೋಡೆ, ಎಂ.ಎಂ.ನಿಂಬರಗಿ, ಟಿ.ಡಿ.ಡಂಗಿ, ಆರ್.ವಿ.ಚೌಗಲಾ ಮತ್ತು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶ್ರೇಯಾ ತ್ರಿವಿಕ್ರಮ ನಿರೂಪಿಸಿದರು. ಡಾ.ಅಶೋಕ ನರೋಡೆ ವಂದಿಸಿದರು. ರೋಹಿಣಿ ಕಾಕಡೆ ಇತರರು ಇದ್ದರು.