ಸಾರಾಂಶ
ಕೇಕ್ ಕತ್ತರಿಸಿ ಶ್ರೀ ದಾನಮ್ಮದೇವಿ ಮಹಿಳಾ ಒಕ್ಕೂಟ ಉದ್ಘಾಟಿಸಲಾಯಿತು. ಬಡಾವಣೆಯ ಮಹಿಳೆಯರನ್ನು ಗೌರವಿಸುವ ಮೂಲಕ ಮಹಿಳಾ ದಿನಾಚರಣೆಯನ್ನೂ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಹೆಣ್ಣು ಸಮಾಜದ ಕಣ್ಣು. ನಾರಿ ಪರಿಪೂರ್ಣತೆಗೆ ದಾರಿ. ಮಹಿಳೆ ಇಳೆಗೆ ಕಳೆ. ಸ್ತ್ರೀ ಇಲ್ಲದವನ ಬಾಳು ಇಸ್ತ್ರೀ ಇಲ್ಲದ ಬಟ್ಟೆಯಂತೆ ಎಂದು ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.ಪಟ್ಟಣದ ದಾನಮ್ಮನಗರ ಬಡಾವಣೆಯಲ್ಲಿ ಶ್ರೀ ದಾನಮ್ಮದೇವಿ ಮಹಿಳಾ ಒಕ್ಕೂಟ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಸುಶಿಕ್ಷಿತಳಾಗಿ, ಸಂಘಟಿತಳಾಗಿ ಸಮರ್ಥಳಾಗಬೇಕು. ಹೊಸ ಬಡಾವಣೆಗಳಲ್ಲಿ ಪ್ರತ್ಯೇಕ ಕಾಂಪೌಂಡ್ ಕಟ್ಟಿಕೊಂಡು ಪರಕೀಯರಂತೆ ಬದುಕುವ ಬದಲು ಎಲ್ಲರೂ ಒಂದಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಸಂಘಟಿತ ಜೀವನ ನಡೆಸಬೇಕು ಎಂದರು.ಪಟ್ಟಣದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸುವರ್ಣಾ ಆಸಂಗಿ ಮಾತನಾಡಿ, ಮಹಿಳೆಯ ಸಬಲೀಕರಣಕ್ಕೆ ಸರ್ಕಾರ ಜಾರಿಗೊಳಿಸಿದ ಯೋಜನೆಗಳನ್ನು ಸದುಪಯೋಗ ಪಡೆದು ಸ್ತ್ರೀ ಸಶಕ್ತಳಾಗಬೇಕು ಎಂದರು.
ಕೇಕ್ ಕತ್ತರಿಸಿ ಶ್ರೀ ದಾನಮ್ಮದೇವಿ ಮಹಿಳಾ ಒಕ್ಕೂಟ ಉದ್ಘಾಟಿಸಲಾಯಿತು. ಬಡಾವಣೆಯ ಮಹಿಳೆಯರನ್ನು ಗೌರವಿಸುವ ಮೂಲಕ ಮಹಿಳಾ ದಿನಾಚರಣೆಯನ್ನೂ ಆಚರಿಸಲಾಯಿತು. ಮಹಿಳಾ ಒಕ್ಕೂಟದಿಂದ ಬಡಾವಣೆಯಲ್ಲಿ ಉದ್ಯಾನ ನಿರ್ಮಿಸುವ ಸಂಕಲ್ಪ ಮಾಡಲಾಯಿತು.ಶ್ರೀ ದಾನಮ್ಮದೇವಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿಜಯಲಕ್ಷ್ಮೀ ಬೆನವಾಡೆ, ಉಪಾಧ್ಯಕ್ಷೆ ಶ್ರುತಿ ಸಿಪ್ರಿ, ಸದಸ್ಯೆ ಡಾ.ಶ್ವೇತಾ ಆರೆನಾಡ, ಪ್ರಭಾವತಿ ಮರೆಗುದ್ದಿ, ಚೆನ್ನಮ್ಮ ಕೊಣ್ಣೂರ, ರೇಣುಕಾ ರೋಣದ, ರೇಖಾ ಈಶ್ವರಪ್ಪಗೋಳ, ರಿಹಾನಾ ಬಿದರಿ, ರಾಜೇಶ್ವರಿ ಗೊಲಭಾಂವಿ, ಶಿವಲೀಲಾ ಕುಂಟೋಜಿ, ನರ್ಮದಾ , ಶೋಭಾ ಮೆಳವಂಕಿ, ಆಶಾ ಪೂಜೇರಿ, ಸುಮಾ ವಿರಕ್ತಮಠ, ವಿದ್ಯಾ ಬಿದರಿ, ಸಾವಿತ್ರಿ ಹ್ಯಾಗಾಡಿ ಇದ್ದರು. ಹಿರಿಯರಾದ ಅಪ್ಪಸಿಗೌಡ ಕೊಣ್ಣೂರ, ಚೆನ್ನಮ್ಮ ಕೊಣ್ಣೂರ, ಆರ್.ಎಸ್. ರೋಣದ, ಎಸ್.ಎಸ್. ಈಶ್ವರಪ್ಪಗೋಳ, ಶಿವಲೀಲಾ ಜಂಬಗಿ, ಎಸ್.ಎಚ್.ಮೆಳವಂಕಿ ಮತ್ತಿತರರು ಇದ್ದರು.