ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿಬಾಬರಿ ಮಸೀದಿ ಧ್ವಂಸಕ್ಕೆ ನಾವು ಅಥಣಿ ಪಟ್ಟಣದಿಂದ 7 ಜನ ಭಾಗವಹಿಸಿದ್ದೆವು. ಮೀರೇಶ್ ರೈಲ್ವೆ ನಿಲ್ದಾಣದಿಂದ ಹೊರಟ ನಾವು, ಉತ್ತರ ಪ್ರದೇಶದ ರೈಲ್ವೆ ನಿಲ್ದಾಣ ಒಂದರಲ್ಲಿ ಇಳಿದು, ಸುಮಾರು 250 ಕಿಲೋ ಮೀಟರ್ ಪಾದಯಾತ್ರೆ ಮೂಲಕ ಅಯೋಧ್ಯೆಗೆ ತಲುಪಬೇಕಾಗಿತ್ತು. ದಾರಿ ಮಧ್ಯ ಗ್ರಾಮ ಒಂದರಲ್ಲಿ ಗೋಲಿಬಾರ್ ಮತ್ತು ಲಾಠಿ ಚಾರ್ಜ್ ಆಗಿ ಅನೇಕ ಕರಸೇವಕರು ಪ್ರಾಣ ತ್ಯಾಗ ಮಾಡಿದರು. ನಾವು ಬಂಡೆಯೊಂದರ ಬದಿಗೆ ಅವಿತು ಪ್ರಾಣಾಪಾಯದಿಂದ ಪಾರಾಗಿ ರಾಮಜನ್ಮಭೂಮಿ ಅಯೋಧ್ಯವನ್ನು ತಲುಪಿದೆವು.ಇದು 1992ರಲ್ಲಿ ಬಾಬರಿ ಮಸೀದಿ ನೆಲಸಮವಾದ್ದಾಗ ಕರಸೇವೆಯಲ್ಲಿ ಪಾಲ್ಗೊಂಡಿದ್ದ ಕರಸೇವಕ ರೇವಣಸಿದ್ದಪ್ಪ ದೂಪ ಅವರ ಮಾತು. ಕನ್ನಡಪ್ರಭ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟುವೆವು ನಾವು ಎಂದು ಶಪಥದಿಂದ ಹೋರಾಟ ನಡೆಸುವ ಮೂಲಕ ಭಾರಿ ಮಸೀದಿ ಧ್ವಂಸ ಮಾಡಿದ್ದೇವು. ಅದೇ ಜಾಗದಲ್ಲಿ ಇಂದು ಪ್ರಭು ಶ್ರೀರಾಮನ ಮಂದಿರ ಕಟ್ಟಿ ಲೋಕಾರ್ಪಣೆ ಗೊಳಿಸುತ್ತಿದ್ದೇವೆ ಎಂಬ ಹೆಮ್ಮೆಯಿಂದ ಎದೆತಟ್ಟಿ ಹೇಳಿಕೊಳ್ಳುವಂತಹ ಕ್ಷಣಕ್ಕೆ ಸಾಕ್ಷಿಯಾಗಿದ್ದೇವೆ ಎಂದರು.
ಆ ಹೋರಾಟದಲ್ಲಿ ಭಾಗವಹಿಸಿದ ಲಕ್ಷಾಂತರ ಕರಸೇವಕರು ಅಯೋಧ್ಯ ಕಡೆ ಬರುವಾಗ ಕೆಲವರು ತಮ್ಮ ಧರ್ಮ ಪತ್ನಿಯರ ಕುಂಕುಮ ಅಳಿಸಿ ತಾಳಿ ಹರೆದು ಭಾಗವಹಿಸಿದ್ದರು. ಏಕೆಂದರೆ ನಾವು ಈ ಹೋರಾಟದಲ್ಲಿ ಭಾಗವಹಿಸಿದಾಗ ಮರುಳಿ ಜೀವಂತವಾಗಿ ಬರುವ ಭರವಸೆ ಇರಲಿಲ್ಲ. ನಾವು ಪ್ರಾಣ ತ್ಯಾಗಕ್ಕೂ ಸಿದ್ದರಾಗಿ ಈ ಹೋರಾಟಕ್ಕೆ ಇಳಿದಿದ್ದೇವೆ. ನಮ್ಮ ಜೀವಗಿಂತ ನಮಗೆ ನಮ್ಮ ಶ್ರಿರಾಮ ಮುಖ್ಯ ಎಂದು ಪ್ರತಿ ಸೇವಕರು ಹೇಳುತಿದ್ದರು.ರಾಮಮಂದಿರ ಉದ್ಘಾಟನೆ ಇಷ್ಟೊಂದು ಅದ್ದೂರಿಯಾಗಿ ನಡೆಯುತ್ತಿರುವುದರ ಹಿಂದೆ ಲಕ್ಷಾಂತರ ಹಿಂದುಗಳ ಹೋರಾಟ, ತ್ಯಾಗ ಮತ್ತು ಬಲಿದಾನದ ಪ್ರತಿಫಲವಿದೆ. ಅಯೋಧ್ಯದಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿ ರಾಮಮಂದಿರ ನಿರ್ಮಾಣಕ್ಕೆ ನಡೆದ ಹೋರಾಟದಲ್ಲಿ ಸಂಘ ಪರಿವಾರದ ಅನೇಕ ಕರೆಸೇವಕರು ತಮ್ಮ ಕುಟುಂಬ, ರಕ್ತ ಸಂಬಂಧಿಗಳನ್ನು ತ್ಯಾಗ ಮಾಡಿ ಪ್ರಾಣದ ಹಂಗು ತೊರೆದರು. ಈ ಸಂದರ್ಭದಲ್ಲಿ ಮೂರು ಲಕ್ಷ ಜನ ಪ್ರಾಣತ್ಯಾಗ ಮಾಡಿದ್ದಾರೆ. ಅಂದು ದೇಶದ ವಿವಿಧ ಮೂಲೆಗಳಿಂದ ಲಕ್ಷಾಂತರ ಸಂಘ ಪರಿವಾರದ ಕರಸೇವಕರು ಸೇರಿ ಶ್ರೀರಾಮರ ಭಜನೆಯಲ್ಲಿ ತೊಡಗಿದ್ದರು. 1992 ರ ಡಿಸೆಂಬರ್ 5ರಂದು ಸಾಯಂಕಾಲ ಬಾಬರಿ ಮಸೀದಿ ಧ್ವಂಸ ಕಾರ್ಯಚರಣೆ ಆರಂಭವಾಗಿ ಬೆಳಗ್ಗೆ 3ಗಂಟೆಗೆ ಒಳಗಾಗಿ ಸಂಪೂರ್ಣ ಧ್ವಂಸಗೊಳಿಸಲಾಯಿತು. ಅಂದಿನ ಪ್ರಧಾನಿ ಪಿ.ವಿ ನರಸಿಂಹರಾವ್ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಕೂಡ ಪ್ರತ್ಯಕ್ಷವಾಗಿ ಸಹಕಾರ ನೀಡಿದ್ದರಿಂದ ಈ ಕಾರ್ಯಾಚರಣೆ ಯಶಸ್ವಿಯಾಗಿತ್ತು. ಭಾರತ ದೇಶದಲ್ಲಿ ಅನೇಕ ಚಳುವಳಿಗಳು ನಡೆದಿರುವ ಇತಿಹಾಸ ಓದಿದ್ದೇವೆ. ಆದರೆ, ಈ ರಾಮ ಜನ್ಮ ಭೂಮಿಯ ವಿಚಾರದಲ್ಲಿ ಮತ್ತು ಬಾಬರಿ ಮಸೀದಿ ಕೆಡುವುವ ಕಾರ್ಯಾಚರಣೆಯಲ್ಲಿ ಮತ್ತು ಚಳುವಳಿಯಲ್ಲಿ ನಾವು ಭಾಗಿಯಾಗಿದ್ದೇವೆ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಅನಿಸುತ್ತದೆ ಎಂದರು.ಶ್ರೀರಾಮಚಂದ್ರ ಎಲ್ಲರಿಗೂ ಬೇಕು: ವಿಶ್ವಕ್ಕೆ ಆದರ್ಶ ವ್ಯಕ್ತಿ ಮತ್ತು ಶಕ್ತಿ ಎನಿಸಿಕೊಂಡಿರುವ ಶ್ರೀರಾಮ ಯಾವುದೇ ಜಾತಿ ಮತ್ತು ಪಕ್ಷಕ್ಕೆ ಸೀಮಿತವಲ್ಲ. ಶ್ರೀರಾಮ ಯಾವುದೇ ಒಂದು ರಾಜಕೀಯ ಪಕ್ಷದ ಸ್ವತ್ತಲ್ಲ. ಭಾರತ ದೇಶಕ್ಕೆ ಅಷ್ಟೇ ಅಲ್ಲ, ವಿಶ್ವದ ಆದರ್ಶ ಪುರುಷ ಎನಿಸಿಕೊಂಡವರು. ಅಂತಹ ಮಹಾದೈವ ಶಕ್ತಿ ಇಂದು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದರು. ಇಂದು ಲಕ್ಷಾಂತರ ಜನರು ಅಯೋಧ್ಯೆಗೆ ಹೊರಟಿದ್ದಾರೆ. ಶ್ರೀ ರಾಮನ ಜನ್ಮ ಭೂಮಿ ಅಯೋಧ್ಯ ಕೂಡ ಇಂದು ಮಹಾ ಪುಣ್ಯಕ್ಷೇತ್ರವಾಗಿದೆ. ನನಗೆ ಈಗ ಹೋಗಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಮಾನಗಳಲ್ಲಿ ಹೋಗುವ ಸಂಕಲ್ಪ ಹೊಂದಿದ್ದೇನೆ. ಆದರೆ ಈಗ ಮನೆಯಲ್ಲಿ ಶ್ರೀ ರಾಮನ ಹೆಸರಿನಲ್ಲಿ ಪೂಜೆ ಸಲ್ಲಿಸಿ ಎಲ್ಲ ಹೋರಾಟಗಾರರ ಸ್ಮರಿಸುವ ಕಾರ್ಯ ಮಾಡುತ್ತೇವೆ. ಅಂದಿನ ಹೋರಾಟದ ಪ್ರತಿಫಲವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಹಿಂದುಗಳ ದೇಣಿಗೆಯ ಹಣದಿಂದ ಸುಂದರವಾದ ದೇವಾಲಯ ನಿರ್ಮಾಣವಾಗಿದ್ದು, ದೇಶದಲ್ಲಿ ಇಂದು ಉತ್ಸಾಹದಿಂದ ಸಂಭ್ರಮಿಸುತ್ತಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))