ಸಾರಾಂಶ
ಪೊಲೀಸರು ಹಾಗೂ ಇತರ ವಾಹನ ಸವಾರರು ಸುಗಮ ವಾಹನ ಸಂಚಾರಕ್ಕೆ ಸಹಕರಿಸಿದರು.
ಬೆಳ್ತಂಗಡಿ: ಬಳ್ಳಾರಿಯಿಂದ ಮಂಗಳೂರಿಗೆ ಕಬ್ಬಿಣ ತುಂಬಿಕೊಂಡು ತೆರಳುತ್ತಿದ್ದ 12 ಚಕ್ರದ ಲಾರಿ ಚಾರ್ಮಾಡಿ ಘಾಟಿಯ ಹತ್ತನೇ ತಿರುವಿನಲ್ಲಿ ಸಿಲುಕಿಕೊಂಡು ಸಂಚಾರ ಅಸ್ತವ್ಯಸ್ತವಾದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಕೊಟ್ಟಿಗೆಹಾರ ಚೆಕ್ ಪೋಸ್ಟ್ ಸಿಬ್ಬಂದಿ ಲಾರಿಯನ್ನು ಚೆಕ್ ಪೋಸ್ಟ್‌ನಲ್ಲಿ ನಿಲ್ಲಿಸಲು ಯತ್ನಿಸಿದರು, ಅಲ್ಲಿ ನಿಲ್ಲಿಸದೆ ಘಾಟಿ ಕಡೆ ಬಂದಿದೆ. ವಿಚಾರ ತಿಳಿದ ಬಣಕಲ್ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಹಾಗೂ ತಂಡ ಕೂಡಲೆ ಘಾಟಿ ಕಡೆ ಆಗಮಿಸಿದಾಗ ಲಾರಿ ತಿರುವಿನಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿತು. ದರಿಂದ ಘಾಟಿ ಭಾಗದಲ್ಲಿ ಅನೇಕ ಹೊತ್ತು ಸಂಚಾರ ಅಸ್ತವ್ಯಸ್ತವಾಯಿತು. ಲಾರಿ ಚಾಲಕನಿಗೆ ದಂಡ ವಿಧಿಸಲಾಗಿದ್ದು ಪೊಲೀಸರು ಹಾಗೂ ಇತರ ವಾಹನ ಸವಾರರು ಸುಗಮ ವಾಹನ ಸಂಚಾರಕ್ಕೆ ಸಹಕರಿಸಿದರು.ಚಾರ್ಮಾಡಿ ಘಾಟಿ ವಿಭಾಗದಲ್ಲಿ ನಿಗದಿಪಡಿಸಿದ ವಾಹನಗಳಿಗೆ ಹೊರತಾಗಿ ಘನವಾಹನ ಸಂಚಾರಕ್ಕೆ ನಿಷೇಧ ಇದೆ. ಆದರೆ ನಿಷೇಧಿತ ವಾಹನಗಳು ಕೊಟ್ಟಿಗೆಹಾರ ವಿಭಾಗದಿಂದ ಆಗಾಗ ಸಂಚರಿಸುವುದು ಕಂಡುಬರುತ್ತದೆ, ಮತ್ತು ಅವು ಘಾಟಿ ವಿಭಾಗದಲ್ಲಿ ಸಿಲುಕಿ ಹಾಕಿಕೊಂಡು ಅವಾಂತರಗಳನ್ನು ಸೃಷ್ಟಿಸುವುದು ನಡೆಯುತ್ತಿದೆ. ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಬಿಗಿಯಾದ ಕ್ರಮ ಇಲ್ಲದಿರುವುದು ಇದಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.