ಸಾರಾಂಶ
ಪ್ರತಿ ವರ್ಷ ವಿಶ್ವದಾದ್ಯಂತ ಸುಮಾರು ಒಂದು ಕೋಟಿ ಜನ ಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಭಾರತದಲ್ಲಿ 14.5 ಲಕ್ಷ ಜನ ಪ್ರತಿ ವರ್ಷ ಈ ಮಾರಕ ರೋಗಕ್ಕೆ ಸಾವನ್ನಪ್ಪುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರತಿ ವರ್ಷ ವಿಶ್ವದಾದ್ಯಂತ ಸುಮಾರು ಒಂದು ಕೋಟಿ ಜನ ಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಭಾರತದಲ್ಲಿ 14.5 ಲಕ್ಷ ಜನ ಪ್ರತಿ ವರ್ಷ ಈ ಮಾರಕ ರೋಗಕ್ಕೆ ಸಾವನ್ನಪ್ಪುತ್ತಿದ್ದಾರೆ. ಈ ರೋಗ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳಾದ ಸರಿಯಾದ ಆಹಾರ ಪದ್ಧತಿ, ನಿಯಮಿತ ವ್ಯಾಯಮ, ನಿದ್ದೆ, ಕಡಿಮೆ ಮೊಬೈಲ್ ಬಳಿಕೆ ಮಾಡಬೇಕೆಂದು ಪ್ರಾಚಾರ್ಯ ಡಾ.ದೀಲಿಪ. ನಾಟೇಕರ್ ತಿಳಿಸಿದರು.ಬಿವಿವಿ ಸಂಘದ ಸಜ್ಜಲಶ್ರೀ ಶುಶ್ರೂಷಾ ವಿಜ್ಞಾನಗಳ ಮಹಾವಿದ್ಯಾಲಯದ ವೈದ್ಯಕೀಯ ಶಸ್ತ್ರ ಚಿಕಿತ್ಸಾ ಶುಶ್ರೂಷಾ ವಿಭಾಗದಿಂದ ನಡೆದ ವಿಶ್ವ ಕ್ಯಾನ್ಸರ್ ರೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಅವರು ಮಾತನಾಡಿದರು.
ಎಸ್.ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನ ಸರ್ಜಿಕಲ್ ಆಂಕೋಲಾಜಿ ವಿಭಾಗದ ಡಾ.ಬಸವರಾಜ ಅಂಕಲಕೋಟಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿ, ಈ ವರ್ಷದ ಧ್ಯೇಯವಾಕ್ಯ ಯುನೈಟೆಡ್ ಬೈ ಯುನಿಕ್ ಎಂಬುದರ ಮಹತ್ವ ವಿವರಿಸಿ, ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ವೈಯಕ್ತಿಕಗೊಳಿಸಿದ, ರೋಗಿ ಕೇಂದ್ರಿತ ಆರೈಕೆ ನಿರ್ಣಾಯಕ ಪಾತ್ರ ವ್ಯಾಖ್ಯಾನಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ವಿಶಿಷ್ಟ ಅಗತ್ಯ ಪೂರೈಸಲು ಕ್ಯಾನ್ಸರ್ ಚಿಕಿತ್ಸೆ ಅಳವಡಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಇದು ಎತ್ತಿ ತೋರಿಸುತ್ತದೆ ಎಂದು ಹೇಳಿದರು.ಕ್ಯಾನ್ಸರ್ ರೋಗ ಹರಡುವ ಮೂಲ ಕಾರಣಗಳು ಹಾಗೂ ಅಪಾಯಕಾರಿ ಅಂಕಿ ಅಂಶಗಳ ಬಗ್ಗೆ ವಿವರಿಸಿದರು. ಇಂದಿನ ದಿನಗಳಲ್ಲಿ ಮಹಿಳೆಯರಲ್ಲಿ ಬಹು ಸಾಮಾನ್ಯವಾದ ಸ್ತನ ಕ್ಯಾನ್ಸರ್ ಹಾಗೂ ಸರ್ವೈಕಲ್ ಕ್ಯಾನ್ಸರ್ ತಡೆಗಟ್ಟಲು ಪರೀಕ್ಷೆಗಳಾದ ಮ್ಯಾಮೋಗ್ರಾಫಿ ಹಾಗೂ ಪ್ಯಾಪ್ ಸ್ಮಿಯರ್ನ ಮಹತ್ವ ತಿಳಿಸಿ, ಮಹಿಳೆಯರಿಗೆ ಎಚ್‌ಪಿವಿ ವ್ಯಾಕ್ಸಿನ್ನ ಲಾಭಗಳು, ಬಳಕೆ ಮತ್ತು ತೆಗೆದುಕೊಳ್ಳುವುದರ ಬಗ್ಗೆ ಒತ್ತು ನೀಡಬೇಕಾಗಿ ಹೇಳಿದರು. ಕ್ಯಾನ್ಸರ್ ರೋಗ ತಡೆಗಟ್ಟಲು ದುಶ್ಚಟಗಳಾದ ತಂಬಾಕು, ಸಿಗರೇಟ್ ಸೇವನೆ, ಮದ್ಯಪಾನ ಸೇವನೆ ಹಾಗೂ ಜೀವನಶೈಲಿಯ ಮಾರ್ಪಾಡುಗಳು ಅಗತ್ಯವೆಂದು ಹೇಳಿದರು.
ಮಹಾವಿದ್ಯಾಲಯದ ವೈದ್ಯಕೀಯ ಶಸ್ತ್ರ ಚಿಕಿತ್ಸಾ ಶುಶ್ರೂಷಾ ವಿಭಾಗದ ಮುಖ್ಯಸ್ಥರಾದ ಪ್ರೊ.ವಾರೇಶ ಚಿಲಾಪೂರ ಗಣ್ಯರನ್ನು ಸ್ವಾಗತಿಸಿದರು. ವಿಭಾಗದ ಪ್ರಾಧ್ಯಾಪಕರಾದ ಶಾಂಭವಿ ಮಾತನಾಡಿ, ಕ್ಯಾನ್ಸರ್ ರೋಗಿಗಳ ಆರೈಕೆಯಲ್ಲಿ ಶುಶ್ರೂಷಕರ ಪಾತ್ರ ನಿರ್ಣಾಯಕವಾಗಿರುತ್ತದೆ ಎಂದು ತಿಳಿಸಿದರು. ಡಾ.ಶ್ರೀಧರ ಪೂಜಾರಿ, ಸಹ ಪ್ರಾಧ್ಯಾಪಕರು ವಂದಿಸಿದರು. ವಿಭಾಗದ ಬೋಧಕ ಸಿಬ್ಬಂದಿ ಪ್ರಫುಲ್ಲಕುಮಾರ ಡಿ, ವನಿತಾ ಯು.ಬಿ, ಶಿಲ್ಪಾ ಹರಿಜನ, ಐಶ್ವರ್ಯ ಸಿ, ಕಿರಣ ಕಲಕಬಂಡಿ ಹಾಗೂ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಭಾಗದ ಉಪನ್ಯಾಸಕರಾದ ಡೈಸಿ ರಾಣಿ ನಿರೂಪಿಸಿದರು.