ಸಾರಾಂಶ
ಬಾಳೆಹೊನ್ನೂರಿನ ರೇಣುಕನಗರದ ಐಟಿಐ ಕಾಲೇಜಿನಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಮಾಹಿತಿ ಶಿಬಿರವನ್ನು ಪಿಎಸ್‌ಐ ರವೀಶ್ ಉದ್ಘಾಟಿಸಿದರು. ಸುರೇಂದ್ರ, ಉಮೇಶ್, ಚಂದ್ರಶೇಖರ್ ಇದ್ದಾರೆ.
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಸಾರಿಗೆ ಹಾಗೂ ರಸ್ತೆ ನಿಯಮ ಪಾಲಿಸದೆ ಭಾರತದಲ್ಲಿ ವಾರ್ಷಿಕ ಐದು ಲಕ್ಷಕ್ಕೂ ಹೆಚ್ಚು ಜನರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡರೆ, ರಾಜ್ಯದಲ್ಲಿ 1.5ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಪಿಎಸ್‌ಐ ರವೀಶ್ ತಿಳಿಸಿದರುರೇಣುಕಾನಗರದ ಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ರೋಟರಿ ಕ್ಲಬ್ ವತಿಯಿಂದ ಬುಧವಾರ ಆಯೋಜಿಸಿದ್ದ ರಸ್ತೆ ಸುರಕ್ಷತೆ ಚಾಲನೆ ಕುರಿತ ಮಾಹಿತಿ ಶಿಬಿರದಲ್ಲಿ ಮಾತನಾಡಿದರು.
18 ವರ್ಷದೊಳಗಿನವರು ದಾಖಲೆ ಇಲ್ಲದೆ ವಾಹನ ಚಾಲನೆ ಮಾಡಿದರೆ ₹25 ಸಾವಿರ ದಂಡ ಹಾಗೂ ಪೋಷಕರ ಮೇಲೆ ಪ್ರಕರಣ ದಾಖಲಾಗುವುದು. ಜೀವವಿಮೆ, ವಾಹನಗಳ ಸಮಗ್ರ ದಾಖಲೆಯೊಂದಿಗೆ ಚಾಲನೆ ಮಾಡಬೇಕು. ಇಲ್ಲವಾದಲ್ಲಿ ಹೆಚ್ಚಿನ ದಂಡ ತೆರಬೇಕಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಕಾನೂನು ನಿಯಮ ಪಾಲನೆ ಮಾಡಬೇಕು ಎಂದರು.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷ ಭಟ್ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ದಾಖಲೆ ಇಲ್ಲದ ವಾಹನ ನೀಡಿ ಚಾಲನೆಗೆ ಪ್ರೇರಣೆ ನೀಡುತ್ತಿದ್ದಾರೆ. ಇದರಿಂದಾಗಿ ತಮ್ಮ ಮಕ್ಕಳ ಭವಿಷ್ಯ ತಾವುಗಳೇ ಹಾಳು ಮಾಡಿಕೊಂಡತಾಗುತ್ತದೆ. ಸುರಕ್ಷಿತ ಚಾಲನೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಎ.ಆರ್.ಸುರೇಂದ್ರ, ತರಬೇತಿ ಕೇಂದ್ರದ ಉಪನ್ಯಾಸಕ ಉಮೇಶ್, ಚಂದ್ರಶೇಖರ್, ರೋಟರಿ ಕಾರ್ಯದರ್ಶಿ ಯಶವಂತ, ಸದಸ್ಯರಾದ ಸಿ.ಪಿ.ರಮೇಶ್,ತಿಮ್ಮಯ್ಯ, ಸಿ.ವಿ.ಸುನೀಲ್, ವೆಂಕಟೇಶ್, ಲಕ್ಷ್ಮೀಶ್ ಮತ್ತಿತರರಿದ್ದರು.