ತುರ್ವಿಹಾಳದಲ್ಲಿ ಶೇ.75.05ರಷ್ಟು ಮತದಾನ

| Published : Jun 04 2024, 12:33 AM IST

ಸಾರಾಂಶ

ತುರ್ವಿಹಾಳ ಪಟ್ಟಣ ಸರ್ಕಾರಿ ಉನ್ನತಿಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ಮತಗಟ್ಟೆ ಕೇಂದ್ರದಲ್ಲಿ ಮತದಾನ ನಡೆಯಿತು.

ತುರ್ವಿಹಾಳ: ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಪಟ್ಟಣದಲ್ಲಿ ಬಿರುಸಿನಿಂದ ಮತದಾನ ನಡೆದಿದ್ದು ಶೇ.75.05 ರಷ್ಟು ಮತದಾನವಾಗಿದೆ.

ಪಟ್ಟಣ ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ತುರ್ವಿಹಾಳ ಹಾಗೂ ಗುಂಜಳ್ಳಿ ಕಂದಾಯ ಹೋಬಳಿಗೆ ಬರುವ 105ರ ಮತಗಟ್ಟೆ ಕೇಂದ್ರದಲ್ಲಿ ಬೆಳಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಹುಮ್ಮಸ್ಸಿನಿಂದ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಕಳೆದ ರಾತ್ರಿ ಮಳೆ ಸುರಿದ ಪರಿಣಾಮ ಇಂದು ತಂಪೆರೆದ ವಾತಾವರಣ ಇದ್ದರಿಂದ ಬಿಸಿಲಿನ ತಾಪ ಮತದಾರಿಗೆ ತಾಕಲಿಲ್ಲ. ಹಿರಿಯ ನಾಗರಿಕರಿಗೆ ನೇರವಾಗಿ ಮತಗಟ್ಟೆ ಒಳಗಡೆ ಪ್ರವೇಶಿಸಿ ಮತಚಲಾಯಿಸಲು ಚುನಾವಣಾ ಸಿಬ್ಬಂದಿ ಅವಕಾಶ ಮಾಡಿಕೊಟ್ಟರು.

ಒಟ್ಟು 396 ಮತದಾರರ ಪೈಕಿ 299 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು ಇದರಲ್ಲಿ 221 ಪುರುಷ ಮತ್ತು 78 ಮಹಿಳಾ ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಡಿ ನಾಗವೇಣಿ ಪಾಟೀಲ್ ಹಾಗೂ ಸಿದ್ದೇಶ್ವರ ಗುರಿಕಾರ ವಕೀಲರು, ಮಾಜಿ ಯುವ ಮೋರ್ಚಾ ಉಪಾಧ್ಯಕ್ಷ ಸುಕುಮುನಿ, ಯುವ ಮತದಾರಾದ ನಿಂಗಪ್ಪ ವಕೀಲರು, ಸೋಮನಾಥ ಮಾಟೂರು, ಚಂದ್ರು ವಕೀಲರು,ಸಂಪಣ್ಣ ಮೇಗೂರ, ಮಲ್ಲಯ್ಯ ಹಿರೇಮಠ, ಮಲ್ಲು ಭಂಗಿ ಮತ ಮತಗಟ್ಟೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಮತಗಟ್ಟೆ ಸುತ್ತ ಸೂಕ್ತ ಪೊಲೀಸ್ ಬಂದಬಸ್ತ್ ಏರ್ಪಡಿಸಲಾಗಿತ್ತು.